ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ರವರ ಅಂತಿಮ ವಿಧಿವಿದಾನ ಕಾರ್ಯಗಳು ಹುಟ್ಟೂರಾದ ಸೋಮನಹಳ್ಳಿಯಲ್ಲಿ ನೆರವೇರಿತು.
ಬೆಂಗಳೂರಿನಿಂದ ಅಂತಿಮ ಯಾತ್ರೆ ಹುಟ್ಟೂರಿಗೆ ಆಗಮಿಸಿದ ಬಳಿಕ ಗಣ್ಯರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಕಾಫೀ ಡೇ ಆವರಣದಲ್ಲಿ ಕೃಷ್ಣರವರ ಅಂತಿಮ ವಿಧಿವಿಧಾನ ಕಾರ್ಯಗಳನ್ನು ನೆರವೇರಿಸಲಾಯಿತು. ಮೂರು ಸುತ್ತು ಕುಶಾಲತೋಪು ಸಿಡಿಸಿ ಅಂತಿಮ ಗೌರವ ಸಮರ್ಪಣೆ ನೀಡಲಾಯಿತು. ಸ್ಪೀಕರ್ ಯು.ಟಿ ಖಾದರ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ್, ಮಾಜಿ ಸಿಎಂ, ಸಂಸದ ಬೊಮ್ಮಾಯಿ, ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮಠಾದೀಶರು ಸೇರಿದಂತೆ ಹಲವು ಗಣ್ಯರುಗಳು ಅಂತಿಮ ನಮನ ಸಲ್ಲಿಸಿದರು.
0 ಕಾಮೆಂಟ್‌ಗಳು