ಬೈಕ್ - ಟೆಂಪೋ ನಡುವೆ ಅಪಘಾತ: ಸುಳ್ಯದ ಯುವಕ ಸಾವು

 


ಸೂರಿಕುಮೇರಿನಲ್ಲಿ ನಿನ್ನೆ ರಾತ್ರಿ ಬೈಕ್ - ಟೆಂಪೊ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತ ಪಟ್ಟಿರುವ ಘಟನೆ ನಡೆದಿದೆ‌.


ಮಂಗಳೂರಿನಲ್ಲಿ ಕೋಸ್ಟಲ್ ಕೋಳಿ ಫಾರ್ಮ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪುನೀತ್ ಮೃತ ಪಟ್ಟ ಯುವಕ. ಕೆಲಸ ಮುಗಿಸಿ ಮನೆಗೆ ಹಿಂತಿರುಗುತಿದ್ದ ವೇಳೆ ಈ ಘಟನೆ ಸಂಭವಿಸಿದ್ದು ಅಪಘಾತವಾದ ತಕ್ಷಣ ಅವರನ್ನು ಮಂಗಳೂರಿ‌ನ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

ತಾಲೂಕಿನ ಅಮರಮುಡ್ನೂರು ಗ್ರಾಮದ ಮರ್ಗಿಲಡ್ಕ ನಿವಾಸಿ ಪುನೀತ್

ತಾಯಿ ಮತ್ತು ಇಬ್ಬರು ಸಹೋದರರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು