ಪುತ್ತೂರಿನ ಸಾಮೆತ್ತಡ್ಕ ಸಮೀಪದ ತೋಡಿನಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಮೃತರನ್ನು ಪಡ್ಡಾಯೂರಿನ ನಿವಾಸಿ ವಿವೇಕಾನಂದ ಕಾಲೇಜಿನ ನಿವೃತ್ತ ಸಿಬ್ಬಂದಿ ನಂದಕುಮಾರ್ ಎಂದು ಗುರುತಿಸಲಾಗಿದೆ.
ನಂದಕುಮಾರ್ ರವರು ಡಿ.5 ರಂದು ಪುತ್ತೂರಿನ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿತ್ತು.
ಸಂಬಂಧಿಕರೊಬ್ಬರಿಗೆ 1 ಲಕ್ಷ ಹಣ ಕೊಡುವುದಾಗಿ ತೆಗೆದುಕೊಂಡು ಹೋಗಿದ್ದು, ಅವರನ್ನು ಹಣಕ್ಕಾಗಿ ಯಾರೊ ಕೊಲೆ ಮಾಡಿದ್ದಾರೆನ್ನಲಾಗುತ್ತಿದೆ. ಇದೀಗ ಅವರ ಶವ ತೋಡಿನಲ್ಲಿ ಪತ್ತೆಯಾಗಿದ್ದು ನಂದಕುಮಾರ್ ರವರನ್ನು ಕೊಲೆ ಮಾಡಿದ್ದಾರೊ, ಅಥವಾ ಆಕಸ್ಮಿಕವಾಗಿ ತೋಡಿಗೆ ಬಿದ್ದು ಸಾವನ್ನಪ್ಪಿದ್ದಾರೊ ಎಂಬುದು ಪೋಲಿಸ್ ತನಿಖೆಯಿಂದ ತಿಳಿದುಬರಬೇಕಿದೆ.
0 ಕಾಮೆಂಟ್ಗಳು