ರೊಟ್ಟಿ ಬಡಿಸುವಾಗ ವಿಳಂಬ: ಮದುವೆ ರದ್ದು ಮಾಡಿದ ವರ

 


ರೊಟ್ಟಿ ಬಡಿಸುವಾಗ ತಡ ಮಾಡಿದ ಕಾರಣಕ್ಕೆ ವರ ಮದುವೆ ರದ್ದು ಮಾಡಿರುವ ಸುದ್ದಿಯೊಂದು ಭಾರೀ ಸದ್ದು ಮಾಡುತ್ತಿದೆ.


ಉತ್ತರ ಪ್ರದೇಶದಲ್ಲಿ ಆಗಿರುವ ಈ ವಿಲಕ್ಷಣ ಘಟನೆ ಇದೀಗ ಭಾರಿ ಸದ್ದು ಮಡುತ್ತಿದ್ದು ಇಂತಹ ಕಾರಣಗಳು ಸಹ ದೊಡ್ಡ ದೊಡ್ಡ ನಿರ್ಧಾರಕ್ಕೆ ದಾರಿ ಮಾಡಿಕೊಡುತ್ತವಾ... ಎಂಬ ಪ್ರಶ್ನೆ ಮೂಡಲಾರಂಭಿಸಿದೆ.


ಡಿ. 22 ರಂದು ಇಂತಹ ಘಟನೆ ಕಂಡು ಬಂದಿದ್ದು, ವರ ತನ್ನ ಸ್ನೇಹಿತರ ಜೊತೆಗೆ ಊಟಕ್ಕೆ ಕುಳಿತ್ತಿದ್ದ ಸಂದರ್ಭದಲ್ಲಿ ವಧುವಿನ ಮನೆಯವರು ವರನಿಗೆ ರೊಟ್ಟಿ ಬಡಿಸಲು ತಡ ಮಾಡುದರೆನ್ನಲಾಗಿದೆ. ಇದೇ ಕಾರಣಕ್ಕೆ ಕೋಪಗೊಂಡ ವರ ತನ್ನ ವಿವಾಹವನ್ನು ರದ್ದು ಮಾಡಿ ಮರುದಿನ ಅತ್ತೆ ಮಗಳೊಂದಿಗೆ ವಿವಾಹ ಮಾಡುಕೊಂಡಿದ್ದಾನೆ.


ಯಾವ ಹೂವು ಯಾರ ಮುಡಿಗೊ ಎಂಬ ಹಾಡಿನ ಸಾಲಿನಂತೆ ಯಾರ ಜೊತೆಗೆ ಹಸೆಮಣೆ ಏರಬೇಕೆಂದು ದೇವರು ಬರೆದಿರುವನೊ ಅದರಂತೆಯೆ ಎಲ್ಲವೂ ನಡೆಯುತ್ತದೆ ಎನ್ನುವುದಕ್ಕೆ ಇದೊಂದು ನಿದರ್ಶನ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು