ಜೋಕಾಲಿಯಲ್ಲಿ ಆಟ ಆಡುತ್ತಿದ್ದ ಸಂದರ್ಭ ಹಗ್ಗ ಕತ್ತುಗೆ ಸುತ್ತಿಕೊಂಡು ಬಾಲಕಿಯೋರ್ವಳು ಮೃತ ಪಟ್ಟ ಘಟನೆ ಬಾನುವಾರ ಸಂಜೆ ಡಿ. 8 ರಂದು ಮಡಲದಲ್ಲಿ ನಡೆದಿದೆ.
ಬಂಟ್ವಾಳದ ಪೆರಾಜೆ ಗ್ರಾಮದ ಬುಡೋಳಿ ಸಮೀಪದ ಮಡಲ ನಿವಾಸಿ ಕಿಶೋರ್ ಅವರ ಪುತ್ರಿ ತೀರ್ಥಶ್ರೀ ಜೋಕಾಲಿ ಆಟವಾಡುತ್ತಿದ್ದಾಗ ಹಗ್ಗ ಸುತ್ತಿಕೊಂಡಿದೆ. ಮೂರನೇ ತರಗತಿಯ ವಿದ್ಯಾರ್ಥಿನಿಯಾಗಿರುವ ತೀರ್ಥಶ್ರೀ ಶೇರಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
0 ಕಾಮೆಂಟ್ಗಳು