ಬಿಗ್ ಬಾಸ್ ಕನ್ನಡ ಸೀಸನ್ 11 ರ ಫೈನಲ್‌ನಲ್ಲಿ ಹನುಮಂತ ಗೆದ್ದಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಸ್ಪರ್ಧಿಸಿ ಅನೇಕರ ಮನ ಗೆದ್ದಿದ್ದು, ಅವರ ಆಟ ಮತ್ತು ಚಾಣಾಕ್ಷತನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಲಾಗುತ್ತಿದ್ದು. ಈಗ ಫೈನಲ್‌ನಲ್ಲಿ ಗೆಲುವು ಸಾಧಿಸಿದ್ದಾರೆ ಎನ್ನಲಾಗುತ್ತಿದೆ.
ಈ ಬಾರೀ ಬಿಗ್ ಬಾಸ್ ನಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಕುತೂಹಲ ಮೂಡಿತ್ತು, ಇದಕ್ಕೆ ಈಗ ಉತ್ತರ ಸಿಕ್ಕಿದ್ದು, ಅದಕ್ಕೂ ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಜೋರಾಗಿ ಸದ್ದು ಮಾಡುತ್ತಿದ್ದವು. ಈ ಬಾರಿ ಯಾರು ಕಪ್ ಗೆದ್ದರು ಎನ್ನುವ ವಿಚಾರ ಮೊದಲೇ ಲೀಕ್ ಆಯಿತೇ ಎನ್ನುವ ಪ್ರಶ್ನೆಯೂ ಮೂಡುವಂತೆ ಆಗಿದೆ.
0 ಕಾಮೆಂಟ್‌ಗಳು