ಬುಧವಾರ ಬೆಳ್ಳಂ ಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ ಕರ್ನಾಟಕವೆ ಮರುಗುವಂತೆ ಮಾಡಿದೆ. ಇಂದು ಬೆಳಗ್ಗೆ ಜ. 22 ರಂದು ಸಂಭವಿಸಿದ ಪ್ರತ್ಯೇಕ ಎರಡು ದುರ್ಘಟೆಯಲ್ಲಿ 14 ಜನರು ಇಹಲೋಕ ತ್ಯಜಿಸಿದ್ದಾರೆ.
ಯಲ್ಲಾಪುರದಲ್ಲಿ ನಡೆದ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದು, ಅರಬೈಲ್ ಘಾಟಿಯಲ್ಲಿ ತರಕಾರಿ ಲಾರಿ ಪಲ್ಟಿಯಾಗಿ 9 ಜನರು ಇಹಲೋಕ ತ್ಯಜಿಸಿದ್ದಾರೆ, 15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಹಾವೇರಿ ಜಿಲ್ಲೆ ಸವಣೂರಿನಿಂದ ಕುಮಟಾಕ್ಕೆ ತೆರಳುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿದೆ. ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂತ್ರಾಲಯದಿಂದ ಆನೆಗುಂದಿಗೆ ದೇವಾಲಯಕ್ಕೆ ಆರಾಧನೆಗೊಂದು ಹೋಗುತ್ತಿದ್ದ 4 ವಿದ್ಯಾರ್ಥಿಗಳು ಸೇರಿದಂತೆ ಚಾಲಕ ಸಮೇತ ಸಾವಿಗೀಡಾಗಿದ್ದು,
ಮೃತ ವಿದ್ಯಾರ್ಥಿಗಳನ್ನು ಆರ್ಯವಂದನ್ (18), ಸುಚೀಂದ್ರ (22) ಮತ್ತು ಅಭಿಲಾಷ್ (20) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಚಾಲಕ ಶಿವ (24) ಕೂಡ ಸಾವನ್ನಪ್ಪಿದ್ದಾರೆ. ಗಾಯಗೊಂಡ 10 ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂತ್ರಾಲಯ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನವು ನರಹರಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಹಂಪಿಗೆ ತೀರ್ಥಯಾತ್ರೆಗೆ ಹೋಗುತ್ತಿತ್ತು. ಸಿಂಧನೂರಿನ ಅರಗಿನಮರ ಶಿಬಿರದ ಬಳಿ ಮುಂಜಾನೆ ಅಪಘಾತ ಸಂಭವಿಸಿದೆ.ಕರಾಳ ಬುಧವಾರದ ಇಡೀ ಕರ್ನಾಟಕವನ್ನು ಶೋಕಸಾಗರದಲ್ಲಿ ಮುಳುಗುಸಿದೆ.
0 ಕಾಮೆಂಟ್‌ಗಳು