ಇಂದು ಜ. 19 ಪೆರುವಾಜೆ ಜಲದುರ್ಗಾ ದೇವಿಯ ಬ್ರಹ್ಮ ರಥೋತ್ಸವ

 


ಸುಳ್ಯ: ಪೆರುವಾಜೆ ಜಲದುರ್ಗಾ ದೇವಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತಿದ್ದು, ಇಂದು ಜ. 19 ರಂದು ರಾತ್ರಿ ಬ್ರಹ್ಮ ರಥೋತ್ಸವ ನಡೆಯಲಿದೆ.


ಜ. 10 ರಂದು ಕ್ಷೇತ್ರದಲ್ಲಿ ಗೊನೆ ಮುಹೂರ್ತ, ಹಾಗೂ ಬ್ರಹ್ಮ ರಥ ಮುಹೂರ್ತ ಗೊಂಡು ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯುತ್ತಿದೆ.  ಪೇಟೆ ಸವಾರಿ, ಭೂತ ಬಲಿ ಎಲ್ಲವೂ ಶುಸುತ್ರವಾಗಿ ನಡೆದು ನಿನ್ನೆ ಜ. 18 ರಂದು ದೀಪೋತ್ಸವ, ಪಲ್ಲಕ್ಕಿ ಉತ್ಸವವು ನಡೆದಿರುತ್ತದೆ.


ಇಂದು ರಾತ್ರಿ ಜಲದುರ್ಗಾ ದೇವಿಯ ವಿಜ್ರಂಭನೆಯ ಬ್ರಹ್ಮರಥೋತ್ಸವ ಹಾಗೂ ಪೆರುವಾಜೆ ಬೆಡಿ ಪ್ರದರ್ಶನ ನಡೆಯಲಿದೆ. ರಾತ್ರಿ 7. ಕ್ಕೆ ಸರಿಯಾಗಿ ವ್ಯಾಘ್ರ ಚಾಮುಂಡಿ ದೈವದ ಭಂಡಾರ ಬಂದ ನಂತರ ರಾತ್ರಿ 10.30 ಪೆರುವಾಜೆ ಕ್ಷೇತ್ರದ ಜಲದುರ್ಗಾ ದೇವಿಯ ಬ್ರಹ್ಮ ರಥೋತ್ಸವ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು