ಶಾಲೆಯಲ್ಲೆ ಹೃದಯಘಾತಕ್ಕೆ ಬಲಿಯಾದ 3 ನೇ ತರಗತಿ ವಿದ್ಯಾರ್ಥಿನಿ: ಚಾಮರಾಜನಗರದಲ್ಲಿ ಘಟನೆ.


ಚಾಮರಾಜನಗರದಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟ ಧಾರುಣ ಘಟನೆ ಇಂದು ಜ‌. 6 ರಂದು ನಡೆದಿದೆ. 


ಚಾಮರಾಜನಗರ ಜಿಲ್ಲೆಯಲ್ಲಿ ಸೈಂಟ್‌ ಫ್ರಾನ್ಸಿಸ್ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ತೇಜಸ್ವಿನಿ  ಎಂದಿನಂತೆ ಶಾಲೆಗೆ ತೆರಳಿದ್ದಾಳೆ, ಈ ವೇಳೆ ಕೊಠಡಿಯಲ್ಲಿದ್ದಾಗ ಆಕೆ ದಿಢೀರನೇ ಕುಸಿದು ಬಿದ್ದಿದ್ದು, ಕೂಡಲೇ ಆಕೆಯ ಕೈ ಕಾಲು ಉಜ್ಜಿ ಎಬ್ಬಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.


ಶಾಲಾ ಸಿಬ್ಬಂದಿ ತಕ್ಷಣವೇ ವಿದ್ಯಾರ್ಥಿನಿ ತೇಜಸ್ವಿನಿಯನ್ನು ಸ್ಥಳೀಯ ಜೆಎಸ್‌ಎಸ್‌ ಆಸ್ಪತ್ರೆಗೆ ಕರೆದೊಯ್ದು ಸೇರಿಸಿದ್ದಾರೆ. ವಿದ್ಯಾರ್ಥಿನಿ ಪರಿಶೀಲಿಸಿದ ವೈದ್ಯರು ಆಕೆಗೆ ಹೃದಯಾಘಾತ ಆಗಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. 

ತಾಲೂಕಿನ ಬದನಗುಪ್ಪೆ ಗ್ರಾಮದ ಲಿಂಗರಾಜು ಎಂಬುವರ ಪುತ್ರಿ ತೇಜಸ್ವಿನಿ (08) ಎಂಬಾಕೆಯೇ ಸಾವಿಗೀಡಾದ ಬಾಲಕಿ. ಶಾಲೆ ಮುಗಿಸಿ ಎಂದಿನಂತೆ ಮಗಳ ಮನೆಗೆ ಹಿಂತಿರುತ್ತಾಳೆ ಎಂದು ಕೊಂಡಿದ್ದ ಮೃತ ಬಾಲಕಿ ಪೋಷಕರಿಗೆ ಈ ಸುದ್ದಿಯಿಂದ ಬರ ಸಿಡಿಲು ಬಡಿದಂತಾಗಿದೆ. ಮಗಳು ಕಳೆದುಕೊಂಡು ಪೋಷಕರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು