ಐಇಡಿ ಸ್ಪೋಟಿಸಿದ ನಕ್ಸಲರು, 8 ಮಂದಿ ಯೋಧರು ಹುತಾತ್ಮ: ಬಿಜಾಪುರದ ಅಂಬೇಲಿಯಲ್ಲಿ ಘಟನೆ

 


ಬಿಜಾಪುರ್ : ಛತ್ತೀಸ್ ಗಢದ ನಕ್ಸಲ್ ಪೀಡಿತ ಪ್ರದೇಶದ ಬಿಜಾಪುರದಲ್ಲಿ ಐಇಡಿ ಸ್ಪೋಟ 8 ಜನ ಯೋಧರು ಹಾಗೂ ಒಬ್ಬ ಚಾಲಕ ಹುತಾತ್ಮರಾಗಿದ್ದಾರೆ. ಇಂದು ಜ. 06  ಮದ್ಯಾಹ್ನ 2.30 ಕ್ಕೆ ಈ ಘಟನೆ ಸಂಭವಿಸಿದೆ.


ನಕ್ಸಲರ ಜಂಟಿ ಕಾರ್ಯಚರಣೆಯಿಂದ ಹಿಂತಿರುಗುತ್ತಿದ್ದ ಸೇನಾ ವಾಹನವನ್ನು ಗುರಿಯಾಗಿಸಿಟ್ಟಿಸಿಕೊಂಡು ನಕ್ಸಲರು ಐಇಡಿ ಸ್ಪೋಟಿಸಿದ್ದಾರೆನ್ನಲಾಗಿದೆ.

ಹುತಾತ್ಮರಾದ ಎಲ್ಲಾ 8 ಯೋಧರು ದಾಂತೇವಾಡ ಡಿಆರ್ ಜಿ ಯವರು ಎಂದು ಗುರುತಿಸಲಾಗಿದೆ. 9ಕ್ಕೂ ಹೆಚ್ಚು ಮಂದಿ ಯೋಧರಿಗೆ ಗಾಯಗಳಾಗಿದ್ದು ಅವರನ್ನು 

ದಾಖಲಿಸಲಾಗಿದೆ.


ಬಿಜಾಪುರ ಜಿಲ್ಲೆಯ ಕುಟ್ರು ಪೋಲಿಸ್ ಠಾಣಾ ವ್ಯಾಪ್ತಿಯ ಅಂಬೇಲಿ ಗ್ರಾಮದಲ್ಲಿ ಮಾವೋವಾದಿಗಳು ಈ ದುಷ್ಕೃತ್ಯ ಎಸಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು