ಶ್ರೀಮತಿ ಲಕ್ಷ್ಮಿ ದೇವಿ ನರಸಿಂಹ ಪೈ ವಿದ್ಯಾಲಯದಲ್ಲಿ ಶಾಲಾ ಚಿತ್ರಕಲಾ ಸಂಘದಿಂದ "ಆರ್ಟ್ ಪೆಸ್ಟ್ " ಚಿತ್ರಕಲಾ ಪ್ರದರ್ಶನ ಡಿ. 28 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿನಿ ಕುಮಾರಿ ಭವಿತಾ ಬರೆದ "ಗೀಚು ಕವಿತೆ" ಕವನ ಪುಸ್ತಕವನ್ನು ಸಾಹಿತಿ, ಶಿಕ್ಷಕರು, ಮುಖ್ಯ ಅತಿಥಿಗಳಾದಂತಹ ಶ್ರೀಮತಿ ಲೈಲಾ ಪರ್ವಿನ್ ಬಸ್ರೂರು ಅನಾವರಣಗೊಳಿಸಿದರು.
ವಿದ್ಯಾರ್ಥಿಗಳ ಸೇವಾ ಮನೋಭಾವನೆಯನದನ್ನು ಗುರುತಿಸಿ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡಿದ ಶಾಲಾ ವಿದ್ಯಾರ್ಥಿನಿ ವೀಕ್ಷಾ, ಶ್ರವಣ ದೋಷದ ಮಕ್ಕಳಿಗೆ ಶ್ರವಣ ಸಾಧನ ಅಳವಡಿತ ಆಭರಣದ ತಯಾರಿಯಲ್ಲಿ ಗುರುತಿಸಿಕೊಂಡ ಶಾಲಾ ವಿದ್ಯಾರ್ಥಿನಿ ರಿಷಿಕಾ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಇಂತಹ ಸೇವಾ ಮನೋಭಾವನೆ ಇತರರಿಗೂ ಮಾದರಿಯಾಗುವ ಆಶಯದಿಂದ ಮಾಡಿದ ಕಾರ್ಯಕ್ರಮ ವಿದ್ಯಾರ್ಥಿಗಳು, ಪೋಷಕರ ಮನ ಮುಟ್ಟುವಂತಿತ್ತು.
ಕಲಾವಿದರು,ಚಿತ್ರಕಲಾ ಶಿಕ್ಷಕರಾದ ಯಶು ಸ್ನೇಹಗಿರಿ ಅವರ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯೋಪಾದ್ಯಾಯಿನಿ ಶ್ವೇತಾ ಕಾಮತ್, ಕಾರ್ಯದರ್ಶಿ ಗಳಾದ ನರೇಂದ್ರನಾಥ ಕುಡ್ವ, ಶಿಕ್ಷಕ, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು