ಬಿದ್ದುಸಿಕ್ಕ ಮೊಬೈಲ್ ನ್ನು ಹಿಂತಿರುಗಿಸಿ ಮಾನವೀಯತೆ ಮೆರೆದ ಗೃಹರಕ್ಷಕದಳ ಸಿಬ್ಬಂದಿ ಮೀನಾಕ್ಷಿ

 


ಪುತ್ತೂರಿನ ಕೆ.ಎಸ್.ಆರ್ .ಟಿ.ಸಿ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಬಿದ್ದು ಸಿಕ್ಕ ಮೊಬೈಲ್ ನ್ನು ಹಿಂತಿರುಗಿಸಿದರ ಮೂಲಕ ಗೃಹರಕ್ಷಕದಳ ಸಿಬ್ಬಂದಿಯೋರ್ವರು ಮಾನವಿಯತೆ ಮೆರೆದಿದ್ದಾರೆ.


ಪುತ್ತೂರಿನ ಕೋಟಿ ಚೆನ್ನಯ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಮೊಬೈಲ್ ಪೋನ್ ಕಳೆದುಕೊಂಡಿದ್ದರು. ಅಲ್ಲಿ ಕರ್ತವ್ಯದಲ್ಲಿದ್ದ ಕಡಬ ಯುನಿಟ್ ನ ಗೃಹರಕ್ಷಕದಳ ಸಿಬ್ಬಂದಿ ಮೀನಾಕ್ಷಿ ರವರಿಗೆ ಮಹಿಳೆ ಕಳೆದುಕೊಂಡಿದ್ದ ಮೊಬೈಲ್ ಸಿಕ್ಕಿದ್ದು ಅದನ್ನು ಮಹಿಳೆಗೆ ಹಿಂತಿರುಗಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು