ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇಂದು ಮಕರ ಜ್ಯೋತಿ ದರ್ಶನವಾಗಿದೆ.
ಮಕರ ಜ್ಯೋತಿ ದರ್ಶನಕ್ಕೂ ಮೊದಲು ಅಯ್ಯಪ್ಪ ಸ್ವಾಮಿಗೆ ಆಭರಣಗಳಿಂದ ಶೃಂಗಾರ ಮಾಡಲಾಗಿತ್ತು, ನಂತರ ಗರ್ಭ ಗುಡಿಯ ಬಾಗಿಲು ತೆರೆದು ಪೂಜೆ ಆರಂಭಿಸುತ್ತಿದ್ದಂತೆ ಮಕರ ಜ್ಯೋತಿ ದರ್ಶನವಾಗಿದೆ. ಈಗಾಗಲೇ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಧಾವಿಸಿ ಮಕರ ಸಂಕ್ರಾಂತಿ ಜ್ಯೋತಿಯನ್ನು ಕಂಡು ಪುಣಿತರಾದರು.
0 ಕಾಮೆಂಟ್‌ಗಳು