ಗೃಹರಕ್ಷಕದಳ ಸಿಬ್ಬಂದಿಗಳಿಬ್ಬರ ಕರ್ತವ್ಯಕ್ಕೆ ಭಾರೀ ಮೆಚ್ಚುಗೆ

 


ಶಾಲಾ -ಕಾಲೇಜಿನ ಯುನಿಪಾರ್ಮ್ ಧರಿಸಿ ಮನೆಯಿಂದ  ಬಂದು ಪುತ್ತೂರು ಬಸ್ ನಿಲ್ದಾಣ ಸೇರಿದಂತೆ ಗಲ್ಲಿ ಗಲ್ಲಿಗಳಲ್ಲಿ ಕೆಲವು ವಿದ್ಯಾರ್ಥಿಗಳು ಅಡಗಿ ಕುಳಿತಿರುವುದನ್ನು  ಗೃಹರಕ್ಷಕದಳ ಸಿಬ್ಬಂದಿಗಳಿಬ್ಬರ ಗಮನಕ್ಕೆ ತರಲಾಗಿತ್ತು.  ಇಂದು ಜ. 16 ರಂದು ಬೆಳಗ್ಗೆ ತರಗತಿಗೆ ಹಾಜರಾಗದೆ ಶಾಲೆಯ ಯುನಿಪಾರ್ಮ್ ಧರಿಸಿ ವಿದ್ಯಾರ್ಥಿಯೊಬ್ಬ ಪುತ್ತೂರು ಪೇಟೆಯಲ್ಲಿ ಸುತ್ತಾಡುತ್ತಿದ್ದ. 





ಆ ವಿದ್ಯಾರ್ಥಿ ಕೆಲವು ದಿನಗಳಿಂದ ತರಗತಿಗೆ ಹಾಜರಾಗದೆ ಪುತ್ತೂರಿನ‌ ಗಲ್ಲಿ‌ ಗಲ್ಲಿಗಳಲ್ಲಿ ಸುತ್ತಾಡಿ ಸಂಜೆ ಮನೆಗೆ ಹಿಂತಿರುಗುತ್ತಿರುವುದನ್ನು ಕೆ.ಎಸ್. ಆರ್.ಟಿ. ಸಿ ಬಸ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕದಳ ಸಿಬ್ಬಂದಿ ಮೀನಾಕ್ಷಿ, ಹಾಗೂ ಪುತ್ತೂರಿನ ಆರ್.ಟಿ. ಓ ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕದಳ ಸಿಬ್ಬಂದಿ ಚೇತನ್ ರವರ ಗಮನಿಸಿದ್ದರು. 




ಇವತ್ತು ಎಂದಿನಂತೆ ವಿದ್ಯಾರ್ಥಿ ಸುಳ್ಯ ಕಡೆಯಿಂದ ಪುತ್ತೂರಿಗೆ ಶಾಲೆಗೆಂದು ಬಂದಿದ್ದು, ತರಗತಿಗೆ ಹೋಗದೆ ಪೇಟೆ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ತಕ್ಷಣ ವಿದ್ಯಾರ್ಥಿಯನ್ನು ವಿಚಾರಿಸಿದ ಮೀನಾಕ್ಷಿ, ಹಾಗೂ ಚೇತನ್ ರವರು ಮಕ್ಕಳ ಅಭಿವೃದ್ದಿ ಯೋಜನಾಧಿಕಾರಿಗಳ ಗಮನಕ್ಕೆ ತಂದು, ವಿದ್ಯಾರ್ಥಿಯ ಮನೆಯವರನ್ನು ಕರೆಸಿ ವಿದ್ಯಾರ್ಥಿಯನ್ನು ಮನೆಯವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಗೃಹರಕ್ಷಕದಳ ಸಿಬ್ಬಂದಿಗಳ ಇಂತಹ ಉತ್ತಮ ಕರ್ತವ್ಯಕ್ಕೆ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು