ಇಡಿ ಸೋಗಿನಲ್ಲಿ ಬೀಡಿ ಮಾಲಿಕನ ಮನೆ ದರೋಡೆ ಮಾಡಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರು ನಿವಾಸಿ ಬೀಡಿ ಉದ್ಯಮಿಯೊಬ್ಬರ ಮನೆಗೆ ನಿನ್ನೆ ರಾತ್ರಿ ಕಾರೊಂದರಲ್ಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ನಾವು ಜಾರಿ ನಿರ್ದೇಶನಾಲಯದಿಂದ ಬಂದಿದ್ದೇವೆಂದು ನಂಬಿಸಿ ಉದ್ಯಮಿಯ ಎಲ್ಲಾ ದಾಖಲೆ ಪತ್ರಗಳನ್ನು ಪರಿಶೀಲಿಸುವ ನಾಟಕವಾಡಿದ್ದಾರೆ.
ಕ್ಷಣ ಮಾತ್ರದಲ್ಲೆ ನಂಬಿಕೆ ವಿಶ್ವಾಸ ಎಲ್ಲವನ್ನು ಧಾರೆ ಎರೆದ ಉದ್ಯಮಿ ಎಲ್ಲಾ ದಾಖಲೆ ಪತ್ರಗಳು ಸೇರಿದಂತೆ ಹಣವನ್ನು ಸಹ ಅವರಿಗೆ ಪರಿಶೀಲನೆಗೆ ಒಪ್ಪಿಸಿದ್ದಾರೆ. ಹಣ ಪಡೆದ ನಕಲಿ ಇಡಿ ಅಧಿಕಾರಿಗಳು ಮನೆಯಿಂದ ಎಸ್ಕೇಪ್ ಆಗಿದ್ದು, ನಂತರ ಎಚ್ಚತ್ತುಕೊಂಡ ಬೀಡಿ ಉದ್ಯಮಿ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಇದೀಗ ಈ ಕುರಿತು ವಿಟ್ಲ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಪೋಲಿಸರು ನಕಲಿ ಇಡಿ ಅಧಿಕಾರಿಗಳಿಗೆ ಬಲೆ ಬೀಸಿದ್ದಾರೆ.
0 ಕಾಮೆಂಟ್‌ಗಳು