ಕೊಡಿಯಾಲ ಗ್ರಾಮದಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ಆಟ: ಕುಡಿಯಲು ನೀರಿಲ್ಲದೆ ಗ್ರಾಮಸ್ಥರ ಪರದಾಟ

 


ಕಳೆದ 5 ದಿನಗಳಿಂದ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ಆಟ ಆಡುತ್ತಿರುವುದಿಂದ ಕುಡಿಯಲು ನೀರಿಲ್ಲದೆ ಗ್ರಾಮಸ್ಥರು ನರಕ ಅನುಭವಿಸುವಂತಾಗಿದೆ.




ಸರಿಯಾಗಿ ವಿದ್ಯುತ್ ಇಲ್ಲದಿರುವ ಕಾರಣ ಪಂಪ್ ಚಾಲನೆ ಆಗದಿರುವುದರಿಂದ ಕುಡಿಯುವ ನೀರಿಗೂ ಹಾಹಕಾರವಾಗಿದೆ. ವಿದ್ಯುತ್ ಸಮಸ್ಯೆಯನ್ನು  ಗ್ರಾಮ ಪಂಚಾಯ್ ಅಧ್ಯಕ್ಷರ ಗಮನಕ್ಕೆ ತರುಬೇಕೆನ್ನುವ ಉದ್ದೇಶದಿಂದ ಗ್ರಾಮಸ್ಥರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.




ಈ ಬಗ್ಗೆ ನೇರವಾಗಿ ಇಂದು ಮಂಗಳೂರು ವಿದ್ಯುತ್ ಸರಬರಾಜು ಕಛೇರಿಯ ಗಮನಕ್ಕೆ ತಂದಿದ್ದು ಕೂಡಲೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆನ್ನಲಾಗಿದೆ. ಅಲ್ಲದೆ ಕೊಡಿಯಾಲ ಗ್ರಾಮ ಪಂಚಾಯತ್ ನ ಬೇಜವಾಬ್ದಾರಿತನದ ಕುರಿತು ಮೇಲಾಧಿಕಾರಿಗಳಿಗೆ ದೂರ ನೀಡಲಾಗಿದೆ ಎಂದು ತಿಳಿದುಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು