ಬೆಳ್ಳಾರೆ ಕೆ.ಪಿ.ಎಸ್ ಶಾಲೆಯ ವಸಂತ ಸಂಭ್ರಮದ ಶೈಕ್ಷಣಿಕ ದಿಬ್ಬಣ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ.

 


ಬೆಳ್ಳಾರೆಯಲ್ಲಿ ಇಂದಿನಿಂದ ನಡೆಯಲಿರುವ ವಸಂತ ಸಂಭ್ರಮ ಕಾರ್ಯಕ್ರಮದ ಶೈಕ್ಷಣಿಕ ದಿಬ್ಬಣ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆಯಿತು.

ಜ. 3 ರಿಂದ 5 ರ ವರೆಗೆ ಮೂರು ದಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಸಂತ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಮೊದಲಿಗೆ ಬೆಳ್ಳಾರೆ ಪೇಟೆಯಿಂದ ಶಾಲಾವರಣದ ವರೆಗೆ ಶೈಕ್ಷಣಿಕ ದಿಬ್ಬಣ ಮೆರವಣಿಗೆ ನಡೆಯಿತು‌.


ಶೈಕ್ಷಣಿಕ ದಿಬ್ಬಣ ಕಾರ್ಯಕ್ರಮಕ್ಕೆ ಬೆಳ್ಳಾರೆ ಠಾಣೆಯ ಉಪನಿರೀಕ್ಷಕರಾದ ಈರಯ್ಯ ರವರು ತೆಂಗಿನ ಕಾಯಿ ಒಡೆದು, ಚೆಂಡೆ ಬಾರಿಸುವ ಮೂಲಕ ಚಾಲನೆ ನೀಡಿ, ವಸಂತ ಸಂಭ್ರಮಕ್ಕೆ ಶುಭಹಾರೈಸಿದರು.






ಕಾರ್ಯಕ್ರಮದಲ್ಲಿ ಗೊಂಬೆ ಕುಣಿತ, ಚೆಂಡೆ, ತಾಳ ಮತ್ತಷ್ಟು ಮೆರುಗು ತಂದಿತ್ತು, ಶಾಲಾ ಕಾಲೇಜಿನ ಮಕ್ಕಳು ಶಿಸ್ತುಬದ್ದವಾಗಿ ಸಾಗಿ ಬರುವ ಮೆರವಣಿಗೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗಕ್ಕೆ ಕಟ್ಟಡವನ್ನು ಕೊಡುಗೆಯಾಗಿ  ನೀಡಿದ ಓಸಾಕ್ ಸಂಸ್ಥೆಯ ಮುಖ್ಯಸ್ಥರನ್ನು ತೆರೆದ ಜೀಪಿನಲ್ಲಿ ಮೆರವಣಿಗೆ ಮೂಲಕ ಶಾಲಾವರಣಕ್ಕೆ ಕರೆತಂದಿದ್ದು ಎಲ್ಲರ ಕಣ್ಮಣ ಸೆಳೆಯಿತು.



ಮೆರವಣಿಗೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಶಾಲಾ ಕಾರ್ಯಧ್ಯಕ್ಷರಾದ ಶ್ರೀನಾಥ್ ಬಾಳಿಲ, ವಸಂತ ಸಂಭ್ರಮದ ಆದ್ಯಕ್ಷರಾದ ಶ್ರೀಮತಿ ರಾಜೀವಿ ಆರ್ ರೈ, ಶಾಲಾ ಆಡಳಿತ ಮಂಡಳಿಯ ಸದಸ್ಯರು,


ವಸಂತ ಸಂಭ್ರಮ ಕಾರ್ಯಕ್ರಮದ ಆಡಳಿತ ಮಂಡಳಿಯ ಸರ್ವಸದಸ್ಯರು, ಶಾಲಾ ಹಳೆ ವಿದ್ಯಾರ್ಥಿಗಳು, ಶಾಲಾ ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ಹಾಗೂ ಊರ ವಿದ್ಯಾಭಿಮಾನಿಗಳೆಲ್ಲರೂ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು