ಸರಿಗಮಪ ಕಾರ್ಯಕ್ರಮದ ರಿಯಾಲಿಟಿ ಶೋ ನಲ್ಲಿ ಜ್ಯೂರಿ ಪ್ಯಾನೇಲ್‌ನಲ್ಲಿ ಇರುತ್ತಿದ್ದ ಬಹುವಾದ್ಯ ಪರಿಣಿತ ಎಸ್ ಬಾಲಸುಬ್ರಹ್ಮಂ (ಎಸ್, ಬಾಲಿ) ರವರು ನಿಧನರಾಗಿದ್ದಾರೆ.
ಢೋಲಕ್, ಢೋಲ್ಕಿ, ತಬಲ, ಮೃದಂಗ, ಖಂಜರಿ, ಕೋಲ್ ಹೀಗೆ ಸಂಗೀತಕ್ಕೆ ಬೇಕಾದ ಹತ್ತು ಹಲವು ವಾದ್ಯಗಳನ್ನು ನುಡಿಸುತ್ತಿದ್ದ ಸಂಗೀತ ಮಾಂತ್ರಿಕ ಎಸ್, ಬಾಲಸುಬ್ರಹ್ಮಂ ರವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ಕಾರ್ಯಕ್ರಮದಲ್ಲಿ ಜ್ಯೂರಿ ಪ್ಯಾನೇಲ್ ನಲ್ಲಿ ಇರುತ್ತಿದ್ದರು.
ಅನೇಕ ಕನ್ನಡ ಚಿತ್ರರಂಗಕ್ಕೆ ಸಂಗೀತ ನುಡಿಸಿರುವ ಎಸ್ ಬಾಲಿ ರವರು ಲಯವಾದ್ಯಗಳ ಕಿಂಗ್ ಎಂದೆ ಪ್ರಸಿದ್ದರಾಗಿದ್ದರು. ಸಂಗೀತ ಕ್ಷೇತ್ರದಲ್ಲಿ ಅವರಿಗೆ ಹತ್ತು ಹಲವು ಪ್ರಶಸ್ತಿಗಳು ಲಭಿಸಿವೆ. ಎಸ್ ಬಾಲ ಸುಬ್ರಹ್ಮಣ್ಯಂ ರವರಿಗೆ 71 ಪ್ರಾಯವಾಗಿದ್ದು ಅವರು ಇಹಲೋಕ ತ್ಯಜಿಸಿದ್ದಾರೆಂದು ತಿಳಿದು ಬಂದಿದೆ.
0 ಕಾಮೆಂಟ್‌ಗಳು