ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳಾಗಿದ್ದ ಧನರಾಜ್ ಆಚಾರ್ಯ ಮತ್ತು ಗೋಲ್ಡ್ ಸುರೇಶ್ ನಡುವಿನ ಸ್ನೇಹದ ಮತ್ತೊಂದು ಉದಾಹರಣೆಯು ಇದೀಗ ಸುದ್ದಿಯಾಗಿದೆ. ಧನರಾಜ್ ಅವರ ಪುತ್ರಿ ಪ್ರಸಿದ್ಧಿಗೆ ಗಟ್ಟಿನ ಮಾತನ್ನು ಉಳಿಸಿಕೊಂಡ ಗೋಲ್ಡ್ ಸುರೇಶ್ ಬೆಲೆಬಾಳುವ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ.
ಬೆಂಗಳೂರಿನ ಧನರಾಜ್ ಅವರ ನಿವಾಸಕ್ಕೆ ಭೇಟಿ ನೀಡಿದ ಸುರೇಶ್ ಅವರು ತೊಟ್ಟಿಲನ್ನು ಹಸ್ತಾಂತರಿಸಿದರು. ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ಬೆರೆಯುತ್ತಿದ್ದ ಧನರಾಜ್, ಹನುಮಂತ್, ಮತ್ತು ಸುರೇಶ್ ತಮ್ಮ ಸಂಬಂಧವನ್ನು ಮುಂದುವರೆಸಿಕೊಂಡಿದ್ದಾರೆ.
ಬಿಗ್ ಬಾಸ್‌ನಲ್ಲಿರುವಾಗ ಧನರಾಜ್ ಮತ್ತು ಹನುಮಂತ್ ಸುರೇಶ್ ಅವರನ್ನು "ಮಾವ" ಎಂದು ಕರೆಯುತ್ತಿದ್ದರು. ಈ ಸಂದರ್ಭದಲ್ಲಿ, "ನಿನ್ನ ಮಗಳಿಗೆ ನಾನು ತೊಟ್ಟಿಲು ಉಡುಗೊರೆ ನೀಡುತ್ತೇನೆ" ಎಂದು ಸುರೇಶ್ ಧನರಾಜ್‌ಗೆ ಮಾತು ಕೊಟ್ಟಿದ್ದರು. ಈ ಮಾತನ್ನು ನೆನೆಸಿಕೊಂಡು, ಅವರು ತಮ್ಮ ಪ್ರೀತಿಯನ್ನು ತೊಟ್ಟಿಲಿನ ರೂಪದಲ್ಲಿ ತೋರಿಸಿದರು.
ಬಿಗ್ ಬಾಸ್ ಮನೆಯಿಂದ ದಿಢೀರ್ ನಿರ್ಗಮಿಸಿದ ಸುರೇಶ್
12ನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಸುರೇಶ್ ಹೊರಬಂದಾಗ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು. ಅದರಲ್ಲೂ, ಅವರ ನಿರ್ಗಮನದ ಕುರಿತು ಹಲವು ಗಾಸಿಪ್‌ಗಳು ಹಬ್ಬಿದ್ದರೂ, ಅವರು ಸ್ವತಃ ಸ್ಪಷ್ಟನೆ ನೀಡಿ ತಮ್ಮ ನಿರ್ಧಾರಕ್ಕೆ ಕಾರಣಗಳನ್ನು ಬಿಚ್ಚಿಟ್ಟಿದ್ದರು.
ಇತ್ತೀಚಿನ ಈ ಘಟನೆ ಧನರಾಜ್ ಮತ್ತು ಸುರೇಶ್ ನಡುವೆ ಇರುವ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಬಿಗ್ ಬಾಸ್ ಮನೆಯಲ್ಲಿ ಉಂಟಾದ ಸ್ನೇಹ ಜೀವನವಿಡೀ ಉಳಿಯಲು ಕಾರಣವಾಗಿದೆ.
0 ಕಾಮೆಂಟ್‌ಗಳು