ನಾಪತ್ತೆಯಾಗಿದ್ದ ಶೇಖಮಲೆಯ ಮಹಿಳೆ ಬಾವಿಯಲ್ಲಿ ಶವವಾಗಿ ಪತ್ತೆ


 ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿರುವ ಘಟನೆ ಪುತ್ತೂರಿನ ಶೇಖಮಲೆಯಲ್ಲಿ ನಡೆದಿದೆ.


ನಿನ್ನೆ ರಾತ್ರಿ ಜ.16 ರಂದು   ಅರಿಯಡ್ಕ ಗ್ರಾಮದ ಶೇಖಮಲೆಯ ಲಲಿತಾ ಎಂಬವರು ನಾಪತ್ತೆಯಾಗಿದ್ದರು. ಇಂದು ಇಡೀ ದಿನ ಅವರ ಪತ್ತೆಗಾಗಿ ಮನೆಯವರು, ಸ್ಥಳಿಯರು ಹುಡುಕಾಟ ನಡೆಸುತ್ತಿದ್ದರು, ಇದೀಗ ಅವರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 


ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಆಗಮಿಸಿ ಶವವನ್ನು ಮೇಲೆತ್ತಿದ್ದಾರೆ, ಸಂಪ್ಯ ಪೋಲಿಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ಪೋಲಿಸ್ ತನಿಖೆಯಿಂದ ತಿಳಿದುಬರಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು