ಎನ್, ಎಸ್, ಯು, ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಘಟಕದಿಂದ ಪ್ರಬಂಧ ಸ್ಪರ್ಧೆ

 


NSUI ಪುತ್ತೂರು ವಿಧಾನಸಭಾ ಕ್ಷೇತ್ರದ ಘಟಕ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ವಿದ್ಯಾರ್ಥಿ ಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಬಂಧ ಕಳುಹಿಸಲು ಕೊನೆಯ ದಿನಾಂಕ ಜನವರಿ 26, ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ದೊಂದಿಗೆ ವಿವೇಕಾನಂದರ ಜೀವನ ಕುರಿತ ಪುಸ್ತಕ ನೀಡಲಾಗುವುದು ಎಂದು ಎನ್ ಎಸ್ ಯು ಐ ಪುತ್ತೂರು ಅಧ್ಯಕ್ಷರಾದ ಎಡ್ವರ್ಡ್ ಡಿಸೋಜ ತಿಳಿಸಿದ್ದಾರೆ.


ನಿಯಮಗಳು ಹೀಗಿವೆ :

ಪ್ರಬಂಧ ವಿಷಯ : “ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಸೌಹಾರ್ದಯುತ ಭಾರತ”. 

ಪ್ರಬಂಧವನ್ನು ತಮ್ಮ ಮನೆಯಿಂದಲೇ ಬರೆದು ಕೆಳಗೆ ನೀಡಲಾದ ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರಬಂಧವು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿರಬೇಕು. ಪ್ರಬಂಧದ ಗರಿಷ್ಠ ಮಿತಿ 2000 ಪದಗಳು. ಹೆಸರು, ಕಾಲೇಜು ಮತ್ತು ತರಗತಿ ನಮೂದಿಸಿ ಜನವರಿ 26 ರ ಒಳಗೆ ಕಳುಹಿಸಬೇಕು.

 

ಪ್ರಬಂಧ ಕಳುಹಿಸಲು ವಾಟ್ಸಾಪ್ ಸಂಖ್ಯೆ : 8147872319, 8660098320 

ಇಮೇಲ್ : nsuiputtur24@gmail.com


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು