ಏಕಾಏಕಿ ರಾಮಸೇನಾ ಸಂಘಟನೆಯಿಂದ ಮಸಾಜ್ ಸೆಂಟರ್ ಗೆ ದಾಳಿ: ಸಿಬ್ಬಂದಿಗಳ ಮೇಲೆ ಹಲ್ಲೆ.

 


ಮಂಗಳೂರಿನ  ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಿರುವ ಯುನಿಸೆಕ್ಸ್ ಸಲೂನ್ ಗೆ  ರಾಮಸೇನಾ ಕಾರ್ಯಕರ್ತರ ತಂಡವೊಂದು ಜ. 23 ಗುರುವಾರ ದಾಳಿ ಮಾಡಿ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಲ್ಲದೆ ಪೀಠೋಕರಣಗಳಿಗೆ ಹಾನಿ ಮಾಡಿದ ಘಟನೆ ನಡೆದಿದೆ.


ಬಿಜೈನಲ್ಲಿ ಕಾರ್ಯಚರಿಸುತ್ತಿರುವ ಕಲರ್ಸ್ ಯುನಿಸೆಕ್ಸ್ ಸಲೂನ್ ಗೆ ಸುಮಾರು 9ರಿಂದ 10 ಅಪರಿಚಿತ ವ್ಯಕ್ತಿಗಳ ತಂಡ ಕಾನೂನುಬಾಹಿರವಾಗಿ ಏಕಾ ಏಕಿ ಪ್ರವೇಶಿಸಿ ಸಲೂನಿನ ಪೀಠೋಕರಣಗಳಿಗೆ ಹಾನಿ ಮಾಡಿದ್ದಾರೆ. ದಾಳಿ ವೇಳೆ ಕಾಂಡೋಮ್ ಸಿಕ್ಕಿದ್ದು ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ. 


ಗುಂಪು ಸಲೂನಿನ ಸೊತ್ತುಗಳಿಗೆ ಹಾನಿಯುಂಟು ಮಾಡಿದೆ. ಈ ವೇಳೆ ಇಬ್ಬರು ಸಿಬ್ಬಂದಿಯ ಮೇಲೂ ಹಲ್ಲೆಯೂ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆನ್ನಲಾಗಿದೆ.  ಒಳನುಗ್ಗಿದವರಲ್ಲಿ ಒಬ್ಬರು ಈ ಘಟನೆಯನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ ಎಂದು ಸೆಲೂನ್ ಮಾಲಿಕ ಪೋಲಿಸರಿಗೆ ದೂರು ನೀಡಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು