ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕಲ್ಲಗದ್ದೆ ಕೊಡಿಯಾಲ ಇದರ 50 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಮಾ. 8 ರಂದು ಶನಿವಾರ ನಡೆಯಲಿದೆ.
ಭಜನಾ ಮಂಡಳಿಯು 50 ವರ್ಷಗಳನ್ನು ಪೂರೈಸಿದ ಪ್ರಯುಕ್ತ ಅದ್ದೂರಿಯಾಗಿ ಸುವರ್ಣ ವರ್ಷವನ್ನು ಆಚರಿಸುತ್ತಿದ್ದು ಅದಕ್ಕಾಗಿ ಈಗಾಗಲೆ ಎಲ್ಲಾ ಸಿದ್ದತೆಗಳಲ್ಲಿ ತೊಡಗಿಸಿಕೊಂಡಿದೆ.
ಜ. 25 ರಂದು ಕೊಡಿಯಾಲ ಗ್ರಾಮದಾದ್ಯಂತ ನಗರ ಭಜನೆಗೆ ಚಾಲನೆ ದೊರೆತಿದ್ದು 150 ಕ್ಕೂ ಹೆಚ್ಚು ಮನೆಗಳನ್ನು ತಲುಪಿ ನಗರ ಭಜನಾ ಕಾರ್ಯಕ್ರಮ ನಡೆಸುತ್ತಿವೆ. ದಿನಲ್ಲಿ 15 ರಿಂದ 20 ಮನೆಗಳಿಗೆ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಆಗಮಿಸಿ ಮನೆ-ಮನೆಗಳಲ್ಲಿ ಭಜನಾ ಸಂಕೀರ್ತನೆಯನ್ನು ಜಪಿಸುತ್ತಾ ಬರುತ್ತಿದ್ದಾರೆ.
ತಂಡದಲ್ಲಿ ಹಿರಿಯರು- ಕಿರಿಯರು ಸೇರಿದಂತೆ ಗ್ರಾಮದಾದ್ಯಂತ ನಗರ ಜನೆಯನ್ನು ನಡೆಸುತ್ತಾ ಬಂದಿದ್ದು ಈ ವರ್ಷ 50 ವರ್ಷಗಳನ್ನು ಪೂರೈಸಿದ ಪ್ರಯುಕ್ತ ಅತ್ಯಂತ ಅದ್ದೂರಿಯಾಗಿ ವಾರ್ಷಿಕೋತ್ಸವ ಆಚರಿಸುತ್ತಿದೆ.
ಮಾ. 8 ರಂದು ಬೆಳಗ್ಗೆ 6 ಗಂಟೆಗೆ ಸರಿಯಾಗಿ ಆಹೋರಾತ್ರಿ ಅಖಂಡ ಭಜನಾ ಸಂಕೀರ್ತನೆ ಪ್ರಾರಂಭವಾಗಲಿದ್ದು 24 ಗಂಟೆಗಳ ಕಾಲ ನಿರಂತರ ಭಜನಾ ಕಾರ್ಯಕ್ರಮಗಳು ನಡೆಯಲಿದ್ದು 25 ಕ್ಕೂ ಹೆಚ್ಚು ಭಜನಾ ತಂಡಗಳು ಆಗಮಿಸಲಿವೆ. ಇದೇ ದಿನ ಸಂಜೆ 4.30 ಕ್ಕೆ ಕಲ್ಲಪಣೆಯ ದರ್ಖಾಸಿನಿಂದ ಕಲ್ಲಗದ್ದೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅದ್ದೂರಿ ಶೋಭಯಾತ್ರೆ ಸಾಗಿ ಬರಲಿದೆ. ರಸ್ತೆಯುದ್ದಕ್ಕೂ ಕುಣಿತ ಭಜನಾ ತಂಡಗಳು, ಚೆಂಡೆ, ವಾದ್ಯ, ಟ್ಯಾಲ್ಬೋ, ಬ್ಯಾಂಡ್ ಗಳು ಮತ್ತಷ್ಟು ಮೆರುಗು ತರಲಿವೆ.
ಸಂಜೆ 7 ಕ್ಕೆ ಸರಿಯಾಗಿ ಕ್ಷೇತ್ರದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ದಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ರವರು ಆಶೀರ್ವಚನ ನೀಡಲಿದ್ದಾರೆ. ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿ ಇರಲಿದ್ದು ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ಮಹಾನೀಯರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ. ಮಾ. 9 ರಂದು ಬೆಳಗ್ಗೆ 6.30 ಕ್ಕೆ ಭಜನಾ ಮಂಗೋಲೊತ್ಸವ, ಪ್ರಸಾದ ವಿತರಣೆ ನಡಯಲಿದೆ.
0 ಕಾಮೆಂಟ್‌ಗಳು