ಸಿಎಂ ದೇವರಾಜು ಅರಸು ರವರಿಗೂ ಔಷಧಿ ನೀಡಿದ್ದ ಪುತ್ತೂರಿನ ಹೆಸರಾಂತ ಕಂಪೌಂಡರ್ ಹಾರಾಡಿ ನಿವಾಸಿ ನರಸಿಂಹ ಭಟ್ ಫೆ. 3 ರಂದು ವಿಧಿವಶರಾಗಿದ್ದಾರೆ.
ತನ್ನ ಹರೆಯದ 16 ರ ವಯಸ್ಸಿನಲ್ಲಿಯೇ ಚಿಕಿತ್ಸಾಲಯದಲ್ಲಿ ಕಂಪೌಂಡರ್ ಆಗಿ ಔಷಧಿ ನೀಡಲು ಆರಂಭಿಸಿದ ನರಸಿಂಹ ಭಟ್ ಪುತ್ತೂರಿನ ಜನತೆಗೆ ಚಿರಪರಿಚಿತರು.
68 ವರ್ಷಗಳ ಕಾಲ ರೋಗಿಗಳಿಗೆ ಔಷಧಿ ನೀಡಿದ್ದ ಅವರು ಸದಾ ನಗು ಮೊಗದಿಂದಲೆ ಎಲ್ಲರನ್ನು ಕಂಡವರು. ಔಷಧಿಗೆಂದು ಬಂದವರಿಗೆ ಹಾಸ್ಯ ಚಟಾಕಿಗಳ ಮೂಲಕ ಕಲ್ಲು ಮನಸನ್ನು ಸಹ ನಗೆ ಕಡಲಲ್ಲಿ ತೇಲಿಸಿದ ಖ್ಯಾತಿ ನರಸಿಂಹ ಭಟ್ ರವರದು.
"ಉಂದುವೆ ಲಾಸ್ಟ್ ನನ ಇಡೆಗ್ ಬರೋರ್ಜಿ" ಎನ್ನುತ್ತಲೆ ಔಷಧಿಯನ್ನು ನೀಡುತ್ತಿದ್ದ ಕಂಪೌಂಡರ್ ನರಸಿಂಹ ಭಟ್ ಇನ್ನು ಕೇವಲ ನೆನಪು ಮಾತ್ರ
0 ಕಾಮೆಂಟ್‌ಗಳು