ಕಾಲೇಜು ವಿದ್ಯಾರ್ಥಿನಿಗೆ ಸ್ನ್ಯಾಪ್ ಚಾಟ್ ನಲ್ಲಿ ತನ್ನ ಬೆತ್ತಲೆ ವೀಡಿಯೊ ಹಾಗೂ ಪೋಟೊಗಳನ್ನು ಕಳುಹಿಸಿರುವುದು ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿ ಮನೆಯಿಂದ ಕಾಲೇಜಿಗೆ ಹೋದ ಬಳಿಕ ವಿದ್ಯಾರ್ಥಿನೀಯ ಮೊಬೈಲ್ ಗೆ ಹೊಸ ನಂಬರಿನಿಂದ ಕರೆ ಬಂದಿದ್ದು ಮೊಬೈಲ್ ನ್ನು ಮನೆಯಲ್ಲಿ ಇಟ್ಟು ಹೋಗಿರುವುದರಿಂದ ಮನೆಯವರು ಕರೆ ಯಾರದೆಂದು ಪರಿಶೀಲಿಸಿದ್ದಾರೆ.
ಈ ವೇಳೆ ಮೊಬೈಲ್ ನಲ್ಲಿ ಯುವಕನೊಬ್ಬನ ಅಸ್ಲೀಲ ವೀಡಿಯೊ, ಪೋಟೊಗಳು ಕಂಡುಬಂದಿದೆ.
ಈ ಕರ್ಮಕಾಂಡವನ್ನು ಕಂಡ ವಿದ್ಯಾರ್ಥಿನೀಯ ಮನೆಯವರು ಮೊಬೈಲ್ ನಲ್ಲಿರುವ Instagram, Snapchat, watspp ಹೀಗೆ ಸಾಮಾಜಿಕ ಜಾಲತಾಣವನ್ನು ಗಮನಿಸಿದಾಗ Snapchat ಮೂಲಕ ಪರಿಚಯಿಸಿಕೊಂಡು ವಾಟ್ಸಪ್ ನಲ್ಲಿ ಯುವಕನೊಬ್ಬ ತನ್ನ ಬೆತ್ತಲೆ ಪೋಟೊ, ವೀಡಿಯೊ ಕಳುಹಿಸಿರುವುದು ತಿಳಿದುಬಂದಿದೆ.
ಈ ರೀತಿಯ ಅಸ್ಲೀಲ ಪೋಟೊ, ವೀಡಿಯೊ ಕಳುಹಿಸಿದ ಯುವಕ ನಿನ್ನನ್ನು ಭೇಟಿಯಾಗುತ್ತೇನೆಂದು ಹೇಳಿರುವುದು ಚಾಟಿಂಗ್ ಲೀಸ್ಟ್ ನಲ್ಲಿ ಲಭಿಸಿದೆ.
ಈಗಾಗಲೆ ಈ ಕುರಿತು ಪೋಲಿಸರಿಗೂ ವಿಷಯ ತಿಳಿಸಿದ್ದು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
0 ಕಾಮೆಂಟ್‌ಗಳು