ಕಳೆದ 7 ದಿನಗಳ ಹಿಂದೆ ಏಕಾಏಕಿ ನಾಪತ್ತೆಯಾಗಿರುವ ಫರಂಗಿಪೇಟೆ ಕಿದೆಬೆಟ್ಟಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ಪತ್ತೆಗೆ ಪೊಲೀಸ್ ತನಿಖೆ ಮುಂದುವರಿದರೂ ಇಲ್ಲಿ ವರೆಗೆ ಆತನ ಬಗ್ಗೆ ಯಾವುದೇ ಮಹತ್ವದ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.
ಫೆ. 25 ರಂದು ಸಂಜೆ ದೇವಸ್ಥಾನಕ್ಕೆ ಹೋದವನು ಮತ್ತೆ ಮನೆಗೆ ಹಿಂತಿರುಗಲಿಲ್ಲ. ನಾಪತ್ತೆ ಕೇಸ್ ದಾಖಲಾಗಿ 7 ದಿನಗಳಾದರೂ ಇನ್ನು ದಿಗಂತ್ ಸುಳಿವು ಸಿಕ್ಕಿಲ್ಲ. ಈ ಪ್ರಕರಣ ಇನ್ನಷ್ಟೂ ನಿಗೂಢತೆಯನ್ನು ಉಂಟು ಮಾಡಿದೆ. ಕಳೆದ ದಿಗಂತ್ ನಾಪತ್ತೆ ಕುರಿತು ರವಿವಾರವೂ ಪೊಲೀಸರು ಆತನ ಕಾಲೇಜಿನಲ್ಲಿ ವಿಚಾರಣೆಯನ್ನು ಮಾಡಿದ್ದಾರೆ.
ಆತನ ಮೊಬೈಲ್ ಸಂದೇಶಗಳ ಆಧಾರದಲ್ಲಿ ಆತ ಎಲ್ಲಿಗೆ ಹೋಗಿದ್ದಾನೆ ಎನ್ನುವುದರ ಕುರಿತು ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಮೊಬೈಲ್ ಹಿಸ್ಟರಿಯ ಚಾಟ್ ಮೂಲಕ ಒಂದಷ್ಟು ಪ್ರಮುಖ ಅಂಶಗಳು ಪೊಲೀಸರ ಗಮನಕ್ಕೆ ಬಂದಿದೆ. ಇದು ತನಿಖೆಯಲ್ಲಿ ಎಷ್ಟು ಉಪಯೋಗಕ್ಕೆ ಬರಲಿದೆ ಎನ್ನುವುದು ಸ್ಪಷ್ಟಗೊಂಡಿಲ್ಲ. ದಿಗಂತ್ ನಾಪತ್ತೆ ಪ್ರಕರಣದ ತನಿಖೆಯಲ್ಲಿ ಪರಿಣಿತ ಪೊಲೀಸ್ ಅಧಿಕಾರಿಗಳ ತಂಡವಿದ್ದು, ವಿವಿಧ ಠಾಣೆಗಳ ಪಿಎಸ್‌ಐಗಳು ವಿವಿದೆಡೆ ಆತನ ಬಗ್ಗೆ ಮಾಹಿತಿ ಸಂಗ್ರಹ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಇನ್ನೊಂದು ಕಡೆ ಆತ ನಾಪತ್ತೆಯಾದ ನಂತರ ಯಾರನ್ನಾದರೂ ಸಂಪರ್ಕ ಮಾಡಿದ್ದಾನೆಯೇ ಎನ್ನುವುದರ ಕುರಿತು ತನಿಖೆ ಮುಂದುವರಿದಿದೆ.
ಇವತ್ತು ಅಥವಾ ನಾಳೆ ದಿನ ಈ ಪ್ರಕರಣದ ಕೆಲವೊಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
0 ಕಾಮೆಂಟ್‌ಗಳು