ನರಿಯೂರು, ಕಣಕಮಜಲು ಗ್ರಾಮದ ಶ್ರೀ ಗಣೇಶ್ ಸ್ಟೋರ್ (ಧನಂಜಯ ಅವರ ಅಂಗಡಿ) ನೊಳಗೆ ಇಂದು ಬೆಳಗಿನ ಜಾವ ಸುಮಾರು 3.30ರ ಸುಮಾರಿಗೆ ದೊಡ್ಡ ಶಬ್ದ ಕೇಳಿಬಂದಿತು. ಶಬ್ದವನ್ನು ಕೇಳಿದ ಅಂಗಡಿಯ ಕಟ್ಟಡ ಮಾಲೀಕ ಸೀತಾರಾಮ ಗೌಡ ಅವರ ಪುತ್ರ ಅಂಗಡಿಯ ಬಳಿ ಬಂದಾಗ, ಅಂಗಡಿಯ ಮುಂದೆ ರಿಟ್ಸ್ ಕಾರು ನಿಂತಿತ್ತು ಮತ್ತು ಶಟರ್ ಮುರಿದ ಸ್ಥಿತಿಯಲ್ಲಿತ್ತು. ತಕ್ಷಣವೇ ಅವರು ಕುಟುಂಬದ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ಈ ಬಗ್ಗೆ ಮಾಹಿತಿ ನೀಡಿದರು.
ಗ್ರಾಮಸ್ಥರು ಕೂಡಲೇ ಸ್ಥಳಕ್ಕೆ ಧಾವಿಸಿ ಕಳ್ಳರನ್ನು ಸೆರೆಹಿಡಿದು ವಿಚಾರಣೆ ನಡೆಸಿದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಕಳ್ಳರನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ.
0 ಕಾಮೆಂಟ್‌ಗಳು