ಒಂಬತ್ತು ತಿಂಗಳು ಹೊತ್ತು ಹೆತ್ತವಳು ತಾಯಿ. ತಾನು ಅದೆಷ್ಟೋ ನೋವು ಅನುಭವಿಸಿ ಭೂಮಿಗೆ ಜನ್ಮ ನೀಡಿದ ದೇವತೆ ತಾಯಿ. ತಾಯಿ ಅಂದರೆ ಮಗುವಿನ ಮೊದಲ ದೇವರು ಎಂದು ಪೂಜಿಸುತ್ತಾರೆ. ಆದರೆ ಅದೇ ತಾಯಿಯನ್ನು ಮರೆತು ಬಿಟ್ಟ ಮಗನ ಕತೆಯನ್ನು ನಿಮ್ಮ ಮುಂದಿಡುತ್ತೇನೆ.
ಒಬ್ಬಳು ತಾಯಿ ಒಂದು ಗಂಡು ಮಗುವಿಗೆ ಜನ್ಮ ನೀಡಿ ಒಂದೇ ತಿಂಗಳಲ್ಲಿ ಗಂಡನನ್ನು ಕಳೆದುಕೊಂಡಳು. ತಾಯಿಗೆ ಗಂಡನಿಲ್ಲ, ಮಗುವಿಗೆ ತಂದೆಲ್ಲದ ಸಮಯ. ಬಡ ಕುಟುಂಬದ ಆಕೆ ತನ್ನ ಮಗುವಿನ ಭವಿಷ್ಯಕ್ಕಾಗಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಮಗುವಿನ ಪೋಷಣೆ ಮಾಡುತ್ತಿದ್ದಳು. ದಿನ ಕಳೆದು, ವರ್ಷ ಕಳೆದಂತೆ ಮಗು ದೊಡ್ಡದಾಯಿತು. ಶಾಲೆಗೆ ಹೋಗುವ ಸಮಯ. ತನ್ನ ಮಗ ವಿದ್ಯೆಯಿಂದ ವಂಚಿತನಾಗದೆ ವಿದ್ಯಾವಂತನಗಬೇಕು ಅನ್ನೋ ಆಸೆಯಿಂದ ಇನ್ನು ಹೆಚ್ಚು ಕಷ್ಟ ಪಟ್ಟು ಹಣ ಸಂಪಾದನೆ ಮಾಡಿ ವಿದ್ಯೆಯನ್ನು ಕೊಡಿಸಿದಳು. ದೊಡ್ಡ ದೊಡ್ಡ ತರಗತಿಗೆ ಹೋಗುತ್ತೀದ್ದಂತೆ ಮಗನಿಗೆ ತಾಯಿಯ ಮೇಲೆ ಪ್ರೀತಿ ಕಡಿಮೆಯಾಗುತ್ತ ಹೋಯಿತು. ತನ್ನ ತಾಯಿಗಿಂತ ನನ್ನ ಗೆಳೆಯರೇ ಮುಖ್ಯ ಅನ್ನೋ ಭಾವನೆ ಅವನಲ್ಲಿ ಬಂತು.
ಪಾಪ ತಾಯಿ ತನ್ನ ಕಷ್ಟವನ್ನು ಮಗನಿಗೆ ತೋರದೆ, ಮಗನ ಶ್ರೇಯಸ್ಸಿಗಾಗಿ ದುಡಿದು ಹಣ ಸಂಪಾದನೆ ಮಾಡಿದರೆ, ಮಗ ಅದನ್ನು ತನ್ನ ಗೆಳೆಯರೊಂದಿಗೆ ಸೇರಿ ಅನಗತ್ಯ ಖರ್ಚು ಮಾಡಲಾರಂಭಿಸಿದ. ಮುಂದೆ ಮಗ ಬೆಳೆಯುತ್ತಾ ಹೋದಂಗೆ ಗೆಳೆಯರೊಂದಿಗೆ ಸೇರಿ ಕುಡಿತ, ಮೋಜು - ಮಸ್ತಿ ಎಂಬ ಜಾಲಕ್ಕೆ ಸಿಲುಕುತ್ತಾನೆ. ಒಮ್ಮೆ ಸಿಕ್ಕ ರುಚಿಯನ್ನು ಬಿಡಲಾರದೆ ದಿನ ಪ್ರತಿ ಕೆಟ್ಟ ಚಟಗಳಿಂದ ತಾನು ಮನೆಗೆ ಬರುವುದನ್ನೇ ಬಿಟ್ಟು ಬಿಟ್ಟ. ತಾಯಿ ತನ್ನ ಗಂಡನು ಸತ್ತು ಹೋದ, ಇದ್ದ ಒಬ್ಬ ಮಗನು ಈ ರೀತಿ ಆದ ಎಂದು ಕೊರಗುತ್ತಾ ಅನಾರೋಗ್ಯಕ್ಕೆ ಒಳಗಾದಳು. ಆದರೇ... ಮಗ ಯಾವುದೇ ಕಾರಣಕ್ಕೂ ಮನೆಗೂ ಹಿಂದಿರುಗದೆ, ತಾಯಿಯ ನೆನಪು ಇಲ್ಲದೆ ಸಮಾಜಬಾಹಿರ ಕೆಲಸ ಮಾಡುತ್ತಾ ಇದ್ದ. ಕಡೆಗೆ ತನ್ನ ತಾಯಿ ಕೊರಗುತ್ತಾ ಕೊರಗುತ್ತಾ ಜೀವ ಬಿಟ್ಟರು ಮಗ ಬರಲಿಲ್ಲ. ತಾಯಿಯ ಸಾವಿನ ಸುದ್ದಿ ತಿಳಿದರೂ ಮಗ ಬರದಿರುವುದನ್ನು ಕಂಡು ತಾಯಿಯ ಶವವನ್ನು ಅನಾಥಶವ ಎಂದು ಊರಿನವರು ಸೇರಿ ಅಂತಿಮ ಕ್ರಿಯೆ ಮಾಡಿದರು.
" ಜನ್ಮ ನಿಡಿದ ತಾಯಿ, ವಿದ್ಯೆ ನೀಡಿದ ಗುರುವನ್ನು ಯಾವತ್ತೂ ಮರೆಯದಿರಿ " ಯಾಕಂದ್ರೆ.... ಇವರು ಶಾಪ ಕೊಟ್ಟರೆ., *ನಾವು ಸತ್ತರೂ ಶಾಪ ಸಾಯಲ್ಲ*
ಬರಹ : ನಿಶಾಂತ್ ಗೌಡ ಪುದುವೆಟ್ಟು
0 ಕಾಮೆಂಟ್‌ಗಳು