ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, ನಾಗಮಂಗಲ - ಮಂಡ್ಯ ಜಿಲ್ಲೆ ಇವರ ನೇತೃತ್ವದಲ್ಲಿ ಬ್ರೈಟ್ ಶೈನ್ ಇಂಟರ್ನ್ಯಾಷನಲ್ ಸ್ಕೂಲ್ - ಬೆಳ್ಳೂರು ಕ್ರಾಸ್ ಇಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಆಯೋಜನೆ.
ಸಂಸ್ಥೆಯ ಸರ್ಕಾರಿ ಶಾಲೆಗಳಿಗೆ ಟೀಚರ್ ಓದಗಣೆ, ಬೆಂಚು- ಡೆಸ್ಕ್ ಓದಗಣೆ, ವೃತ್ತಿಪರ ಶಿಕ್ಷಣ ಪಡೆಯಲು ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮ ಮತ್ತು ನಂತರ ಶಾಲೆ - ಕಾಲೇಜು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳು ನಡೆಯುತ್ತಿವೆ. ಒಬ್ಬ ವಿದ್ಯಾರ್ಥಿ ಮೊಬೈಲ್ ಫೋನ್ ಜಾಲಕ್ಕೆ ಸಿಲುಕಿ ತನ್ನ ಬುದ್ದಿವಂತಿಕೆಯಿಂದ ಜೀವವನ್ನೇ ಕಳೆದುಕೊಂಡ ನೈಜ ಘಟನೆಯನ್ನು ತಿಳಿಸುವುದರ ಮೂಲಕ ಸಂಸ್ಥೆಯ ಮೇಲ್ವಿಚಾರಕರಾದ ನಿಶಾಂತ್ ಗೌಡ ಪುದುವೆಟ್ಟು ಅವರು ಪ್ರಾಸ್ತವಿಕ ನುಡಿದರು.
ಒಬ್ಬ ವೆಕ್ತಿ ತನ್ನ ವೆಕ್ತಿತ್ವವನ್ನು ರೂಪಿಸಿಕೊಳ್ಳಲು ಅಧ್ಯಯನ ವೆವಸ್ಥೆಯ ಆಲೋಚನೆ ಮತ್ತು ಆತ್ಮಸ್ಥೈರ್ಯ ಬಹಳ ಅತ್ಯಗತ್ಯ. ಬದುಕಿನಲ್ಲಿ ಬೇಕು- ಬೇಡಗಳ ವಿಚಾರ, ಸಮಾಜದ ಮುಂದಿನ ಸ್ಥಿತಿ - ಗತಿಗಳನ್ನು ಅರಿತು ಮುಂದಿನ ಜೀವನ ಹೇಗೆ ರೂಪಿಸಿಕೊಳ್ಳುವುದು ಅನ್ನೋ ಚಿಂತನೆ ಮಾಡಿ, ಸಮಾಜದಲ್ಲಿ ಒಬ್ಬ ಆದರ್ಶ ವೆಕ್ತಿಯಾಗಿ ಬದುಕಬೇಕು ಎಂದು ಸಂಪನ್ಮೂಲ ವೆಕ್ತಿ ನಿವೃತ್ತ ಉಪನ್ಯಾಸಕರಾದ ನಾಗರಾಜ್ ಪ್ರಕಟಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮುಖ್ಯಸ್ಥರಾದ ಶ್ರೀಮತಿ ನಾಗರತ್ನ, ಸೇವಾಪ್ರತಿನಿಧಿ ಪಾತಿಮ ಖಾನಂ,ಮುಖ್ಯ ಶಿಕ್ಷಕರು - ಅಧ್ಯಾಪಕವೃಂದದವರು ಮತ್ತು ವಿದ್ಯಾರ್ಥಿಗಳು ಪಡೆದ
0 ಕಾಮೆಂಟ್‌ಗಳು