ಹೊಸ ಕಿರುಚಿತ್ರದ ಬಗ್ಗೆ ಅಪ್ಡೇಟ್ ನೀಡಿದ ಪುತ್ತೂರಿನ ತಂಡ

ಪುತ್ತೂರು : ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ರವರ ಹುಟ್ಟುಹಬ್ಬದ ದಿನವಾದ ಇಂದು (ಮಾರ್ಚ್ 17) ಪುತ್ತೂರಿನ ಪ್ರಮುಖ ಕಿರುಚಿತ್ರ ತಂಡ Firstfly Creations ತನ್ನ ಹೊಸ ಕಿರುಚಿತ್ರದ ಬಗ್ಗೆ ಅಪ್ಡೇಟ್ ನೀಡಿದೆ. 


ಡಾ. ಪುನೀತ್ ರಾಜಕುಮಾರ್ ರವರ ಜನ್ಮದಿನದ ಶುಭಾಶಯಗಳನ್ನು ಕೋರುವ ಪೋಸ್ಟರ್ ಬಿಡುಗಡೆ ಮಾಡಿರುವ ತಂಡ, ಮಾರ್ಚ್ 22 ರಂದು ತನ್ನ ತಂಡದ ಕಿರುಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ನೀಡುವುದಾಗಿ ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಘೋಷಿಸಿದೆ.

ಪುತ್ತೂರಿನ ಗ್ರಾಮೀಣ ಭಾಗದ ಯುವಕರ ತಂಡವು ತನ್ನ ವಿಭಿನ್ನ ಪ್ರಯತ್ನದೊಂದಿಗೆ ಜನರ ಮುಂದೆ ಬರುವುದಕ್ಕೆ ಸಿದ್ಧವಾಗಿದ್ದು, ಮಾರ್ಚ್ 22 ರಂದು ಕುತೂಹಲಕ್ಕೆ ಉತ್ತರ ಸಿಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು