ಸುರಕ್ಚಿತವಾಗಿ ಭೂಮಿಗೆ ಬಂದಿಳಿದ ಸುನೀತಾ ವಿಲಿಯಮ್ಸ್


 ಸತತ 9 ತಿಂಗಳ ಬಾಹ್ಯಾಕಾಶ ಯಾತ್ರೆಯ ನಂತರ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಸಯರಕ್ಷಿತವಾಗು ಭೂಮಿಗೆ ಮರಳಿದ್ದಾರೆ. ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಫ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿಯಿತು.




ಭಾರತೀಯ ಮೂಲದ ನಾಸಾ  ಗಗನಯಾತ್ರಿ ಸುನಿತಾ ವಿಲಿಯಮ್ಸ್  ಮತ್ತು ಅವರೊಂದಿಗೆ ಕ್ರ್ಯೂ-9 ಮಿಷನ್‌ನ ಇತರ ಸದಸ್ಯರು ಬುಧವಾರ ಮುಂಜಾನೆ ಮಾ.19 ರಂದು ಭೂಮಿಗೆ ತಲುಪಿದ್ದಾರೆ. ಬಾಹ್ಯಾಕಾಶದಿಂದ ಭೂಮಿಗೆ ಪ್ರಯಾಣ ಮಾಡುವುದು ತುಂಬಾ ಕಷ್ಟಕರ ಮತ್ತು ಅಪಾಯಕಾರಿ. ಆದರೂ ಸಹ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದ್ದು ಎಲ್ಲರೂ ಸಂತೋಷ ಪಡುವಂತೆ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು