ನಾಪತ್ತೆಯಾಗಿದ್ದ ದಿಗಂತ್ ಕೊನೆಗೂ ಪತ್ತೆ: ಉಡುಪಿಯಿಂದ ಬಂಟ್ವಾಳಕ್ಕೆ ಕರೆತರುತ್ತಿದ್ದಾರೆ ಪೋಲಿಸರು


 ಪರಂಗಿಪೇಟೆಯ ಕಿದೆಬೆಟ್ಟುವಿನ  ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ಕೊನೆಗೂ ಪತ್ತೆಯಾಗಿದ್ದಾನೆ. ಫೆ. 25 ರಂದು ನಾಪತ್ತೆಯಾಗಿದ್ದ ದಿಗಂತ್ ಪತ್ತೆಗಾಗಿ ಪೋಲಿಸರು ಸಾಕಷ್ಟು ಶ್ರಮವಹಿಸಿದ್ದರು. 


ಇತ್ತ ಕೆಲವು ಸಂಘಟನೆಗಳು ಕೂಡಲೆ ಅವನನ್ನು ಪತ್ತೆಹಚ್ಚುವಲ್ಲಿ ಪೋಲಿಸರು ವಿಫಲವಾಗಿದ್ದಾರೆಂದು ವಿರೋಧಿ ಪ್ರತಿಭಟನೆಗಳನ್ನು ನಡೆಸಿದ್ದವು‌. ಮಾರ್ಚ್ 12 ಒಳಗೆ ನಾಪತ್ತೆ ಕುರಿತು ವರದಿ ನೀಡುವಂತೆ ನ್ಯಾಯಲಯ ಪೋಲಿಸರಿಗೆ ಸೂಚನೆ ನೀಡಿತ್ತು. 


ಇದೀಗ ದಿಗಂತ್ ಉಡುಪಿಯ ಡಿ ಮಾರ್ಟ್ ನಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ‌. ದಿಗಂತ್‌ ತನ್ನ ತಾಯಿಗೆ ಕರೆ ಮಾಡಿ,  ನಾನು ಉಡುಪಿಯಲ್ಲಿ ಸುರಕ್ಷಿತನಾಗಿದ್ದೇನೆ ಎಂದು ಹೇಳಿದ್ದಾನೆ. ತಾನಾಗಿ ಹೋಗಿಲ್ಲ, ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ದಿಗಂತ್‌ ಹೇಳಿದ್ದಾನೆ ಎನ್ನಲಾಗಿದೆ. ಕೊನೆಗೂ 12 ದಿನಗಳಿಂದ ವಿದ್ಯಾರ್ಥಿ ನಾಪತ್ತೆ ಪ್ರಕರಣಕ್ಕೆ ಒಂದು ಸುಖಾಂತ್ಯ ಕಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು