ದಿಗಂತ್ ಪತ್ತೆಯ ಹಿಂದಿದೆ ದೈವ- ದೇವರ ಪವಾಡ


 ಕಿದೆಬೆಟ್ಟುವಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿರುವ ಪ್ರಕರಣ ರಾಜ್ಯಾದ್ಯಂತ ಭಾರೀ ಸಂಚಲನ ಉಂಟು ಮಾಡಿತ್ತು. ಪತ್ತೆ ಹಚ್ಚುವಲ್ಲಿ ಪೊಲೀಸರು ಹಗಲುರಾತ್ರಿಯೆನ್ನದೆ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಅದೆಲ್ಲದರ ನಡುವೆಯೂ ಸಂಘ ಪರಿವಾರಗಳು, ರಾಜಕೀಯ ಪಕ್ಷಗಳು ಸೇರಿದಂತೆ ಪ್ರತಿಭಟನೆ ನಡೆಸಿದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ, ಪತ್ತೆ ಹಚ್ಚುವ ಕೆಲಸ ಮಾಡುತ್ತಿಲ್ಲವೆಂದು ದೂರಿದ್ದರು. 

ಕೊನೆಗೂ ಮಾ.08 ರಂದು ಮದ್ಯಾಹ್ನ ಸಮಯ ಉಡುಪಿಯ ಡಿಮಾರ್ಟ್‌ನಲ್ಲಿ ದಿಗಂತ್‌ ಪ್ರತ್ಯಕ್ಷನಾಗಿದ್ದಾನೆ.





ದಿಗಂತ್‌ ಈಗಾಗಲೇ ಇರುವ ಹಿಂದೆ ದೈವ- ದೇವರ ಪವಾಡ ಇದೆ ಎನ್ನಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವ- ದೇವಾರಾಧನೆಗೆ ಈ ಹಿಂದೆಯೂ ಪವಾಡಗಳು ನಡೆದಿವೆ. ಅದರಂತೆ ದಿಗಂತ್ ಪತ್ತೆಯ ಹಿಂದೆ ದೈವದ ಪವಾಡ ನಡೆದಿದೆ.


ದಿಗಂತ್‌ ಕುಟುಂಬವು ಅರ್ಕಳ ಉಳ್ಳಾಕುಲು ಮಗೃಂತಾಯ ದೈವದ ಚಾಕರಿ ಮಾಡಿಕೊಂಡು ಬರುತ್ತಿತ್ತು, ನಾಲ್ಕು ತಲೆಮಾರಿನಿಂದ ಇಲ್ಲಿ ಸೇವೆ ತಮ್ಮ ಸಲ್ಲಿಸಲಾಗುತ್ತಿದೆ. ದಿಗಂತ್‌ ಸಹೋದರ ರವಿ ದೈವಸ್ಥಾನದಲ್ಲಿ ದೀವಟಿಗೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ರವಿ ಅವರು ನೇಮೋತ್ಸವ ಸಂದರ್ಭದಲ್ಲಿ ತಮ್ಮನಿಗಾಗಿ ಮನಸಲ್ಲೇ ಸಂಕಲ್ಪ ಮಾಡಿದ್ದು ಆದಷ್ಟು ಬೇಗ ಅವನು ಎಂದು ಪ್ರಾರ್ಥಿಸಿದ್ದರು. 


ನೇಮೋತ್ಸವದ ಧ್ವಜ ಮೇಲರಿ ಕೆಳಗೆ ಇಳಿಯುವುದರೊಳಗೆ ನನ್ನ ತಮ್ಮ ಇರಬೇಕು ಎಂದು ಸಂಕಲ್ಪ ಮಾಡಿದೆ. ಜನರು ಕೂಡ ದೈವದಲ್ಲಿ ಈ ಕುರಿತು ತಿಳಿಸಲು ಸೂಚಿಸಲಾಗಿದೆ. ದೈವದಲ್ಲಿ ಪ್ರಶ್ನೆ ಕೇಳಲು ಮುಂದಾಗದ ರವಿ ನಮ್ಮ ಸೇವೆಗೆ ದೈವ ದಿಗಂತ್‌ನ ಪತ್ತೆ ಮಾಡಬೇಕು. ನೇಮೋತ್ಸವ ಸಂದರ್ಭ ಏರಿದ ಕೊಡಿ ಇಳಿಯುವುದರೊಳಗೆ ತಮ್ಮ ಬರಬೇಕು ಎಂದು ಹರಕೆ ಹೊತ್ತಿದ್ದಾರೆ.


ರವಿವಾರ ದೈವದ ನೇಮೋತ್ಸವದ ಧ್ವಜಾರೋಹಣ ನಡೆದಿತ್ತು. ಆದರೆ ಶನಿವಾರ ಸಂಜೆ ದಿಗಂತ್‌ ಇದ್ದಿದ್ದ. ದೈವ ತನ್ನ ಚಾಕರಿ ಮಾಡುವವರಿಗೆ ಫಲವನ್ನು ನೀಡಿ. ಈ ಮೂಲಕ ನನ್ನ ತಮ್ಮನನ್ನು ಉಳ್ಳಾಕುಲು ಮಗ್ರಂತಾಯ ದೈವವೇ ಪತ್ತೆ ಹಚ್ಚಿದೆ ಎಂದು ರವಿ ಹೇಳಿದ್ದಾರೆ.

ದಿಗಂತ್ ನಂಬಿದ್ದು ಅವರ ಮನೆ ಮಂದಿ ಇದ್ದ ದೈವ ದೇವರ ಅನುಗ್ರಹದಿಂದ, ನಂಬಿದವರನ್ನು ದೈವ ದೇವರುಗಳು ಕೈಬಿಡುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು