ಭಾರತ ಭವ್ಯ ಪರಂಪರೆಯ ಇತಿಹಾಸವನ್ನು ಹೊಂದಿರುವ ಪವಿತ್ರ ಭೂಮಿ. ಸನಾತನ ಧರ್ಮದ ಮೂಲ ನೆಲೆಯಾಗಿರುವ ಭರತಖಂಡವು ತನ್ನದೇ ಆದ ವಿಭಿನ್ನ ಆಚರಣೆಗಳಿಂದ ವಿಶ್ವದಲ್ಲಿ ಮಾನ್ಯತೆ ಪಡೆದಿದೆ. ವೇದಗಳು, ಪುರಣಗಳು, ಉಪನಿಷತ್ತುಗಳು ಇದಕ್ಕೆ ಸಾಕ್ಷಿ ಎಂಬಂತೆ ಇನ್ನು ಭಾರತದಲ್ಲಿ ಜೀವಂತವಾಗಿವೆ. ವಿಭಿನ್ನ ಧರ್ಮಗಳ ನೆಲೆಯಾಗಿರುವ ಭಾರತದಲ್ಲಿ ಸನಾತನ ಧರ್ಮ ತನ್ನದೇ ಆದ ಐತಿಹ್ಯವನ್ನು ಹೊಂದಿದೆ . ನೂರಾರು ಸಾಧು ಸಂತರು ತಪಸ್ಸು ಮಾಡಿ. ಪವಾಡಗಳಿಗೆ ಸಾಕ್ಷಿಯಾದ ಹಿಂದೂ ಧರ್ಮದಲ್ಲಿ ಪುಣ್ಯಕ್ಷೇತ್ರಗಳ ಭೇಟಿ , ಪವಿತ್ರ ನದಿಗಳ ಸ್ನಾನ ಹಿಂದೂ ಆಚರಣೆ ಪದ್ಧತಿಗಳಲ್ಲಿ ಪ್ರಮುಖವಾದವು . ಶಿವನನ್ನು ಆರಾಧಿಸುವವರನ್ನು ಶೈವರು ಎಂದು ಹಾಗೂ ವಿಷ್ಣುವಿನ ಆರಾಧಕರನ್ನು ವೈಷ್ಣವರೂ ಎಂದು ಹಾಗೂ ದೇವಿ ಆರಾಧಕರನ್ನು ಶಕ್ತಿ ಪಂಥದವರೆಂದು ಕರೆಯಲಾಗುತ್ತದೆ. ಹೀಗೆ ಭಾರತದಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುವ ಈ ಪವಿತ್ರ ಭೂಮಿಯಲ್ಲಿ ನೂರಾರು ಪುಣ್ಯಕ್ಷೇತ್ರಗಳಿವೆ . ಇದೀಗ ಇಂಥದ್ದೇ ಒಂದು ಪವಿತ್ರ ದೇವಸ್ಥಾನದ ಕುರಿತು ನಾವೆಲ್ಲರೂ ತಿಳಿಯೋಣ
.ಪ್ರತ್ಯಂಗಿರಾ ದೇವಿ ಎಂದರೆ ಯಾರಿಗೆ ತಾನೇ ತಿಳಿದಿಲ್ಲ ? ಇವಳನ್ನು ಅಥರ್ವಣ ಭದ್ರಕಾಳಿ, ಮತ್ತು ನಿಕುಂಬಳ ಎಂದೂ ಕರೆಯುತ್ತಾರೆ. ಇವಳು ಶಕ್ತಿ ಧರ್ಮಕ್ಕೆ ಸಂಬಂಧಿಸಿದ ಹಿಂದೂ ದೇವತೆ . ಅವಳು ಶರಭನ ಸ್ತ್ರೀ ಶಕ್ತಿ ಮತ್ತು ಪತ್ನಿ ಎಂದು ವಿವರಿಸಲಾಗಿದೆ. ತ್ರಿಪುರ ರಹಸ್ಯದ ಪ್ರಕಾರ, ಅವಳು ತ್ರಿಪುರ ಸುಂದರಿಯ ಕೋಪದ ಶುದ್ಧ ಅಭಿವ್ಯಕ್ತಿ. ವೇದಗಳಲ್ಲಿ ಪ್ರತ್ಯಂಗಿರಾಳನ್ನು ಅಥರ್ವ ವೇದ ಮತ್ತು ಮಾಂತ್ರಿಕ ಮಂತ್ರಗಳ ದೇವತೆಯಾದ ಅಥರ್ವಣ ಭದ್ರಕಾಳಿಯ ರೂಪದಲ್ಲಿ ಪ್ರತಿನಿಧಿಸಲಾಗುತ್ತದೆ . ಪ್ರತ್ಯಂಗಿರಾ ದೇವಿಯು ಮಾತೃ ಹೃದಯದ ತಾಯಿಯಾಗಿದ್ದಾಳೆ .
ಭಾರತದಲ್ಲಿ ಜ್ಯೋತಿಷ್ಯ ಶಾಸ್ತ್ರವು ತನ್ನದೇ ಆದ ಪರಂಪರೆಯನ್ನು ಹೊಂದಿದೆ. ಪ್ರಸ್ತುತ ದಿನಮಾನಗಳಲ್ಲಿ ಶತ್ರು ಬಾದೆ, ವಾಮಾಚಾರ, ಸಾಲದ ಸಂಕಷ್ಟ, ವಿದ್ಯೆಯಲ್ಲಿ ತೊಂದರೆ ಈಗ ಅನೇಕ ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ ಮತ್ತು ಕಷ್ಟ ಬಂದಾಗ ವೆಂಕಟರಮಣ ಎನ್ನುವಂತೆ ದೇವರ ಮೊರೆ ಹೋಗುವುದು ಸಹಜ. ಅದೇ ರೀತಿ ಶಕ್ತಿ ದೇವತೆಯಾಗಿ ಬರುವ ತನ್ನ ಭಕ್ತರ ಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ . ಸಾವಿರಾರು ಭಕ್ತರ ಆರಾಧ್ಯ ದೇವಿಯಾಗಿ ನೆಲೆಸಿರುವ ಪ್ರತ್ಯಂಗಿರಾ ದೇವಿಯು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರ್ ಕ್ರಾಸ್ ನಲ್ಲಿ ನೆಲೆಸಿ ನೂರಾರು ಭಕ್ತರ ಕಷ್ಟಗಳಿಗೆ ಪರಿಹಾರವನ್ನು ಒದಗಿಸುತ್ತಿರುವ ಶಕ್ತಿ ದೇವತೆಯಾಗಿದ್ದಾಳೆ. ಅಂಜನಾದ್ರಿ ಸಿದ್ದಿ ಪೀಠದ ಪೀಠಾಧಿಕಾರಿಗಳಾದ ಚರಣ್ ಭಾರದ್ವಾಜ್ ಗುರೂಜಿರವರು ಈ ಶಕ್ತಿ ಪೀಠದ ಧರ್ಮಾಧಿಕಾರಿಗಳಾಗಿ . ಪ್ರತ್ಯಂಗಿರಾ ದೇವಿಯ ಉಪಾಸಕರಾಗಿ ಬರುವ ಭಕ್ತರ ಕಷ್ಟಗಳಿಗೆ ಪರಿಹಾರವನ್ನು ನೀಡುತ್ತಿದ್ದಾರೆ . ವಂಶ ಪಾರಂಪರ್ಯವಾಗಿ ವೀರಾಂಜನೇಯ ಸ್ವಾಮಿಯವರನ್ನು ಮತ್ತು ತ್ರಿಪುರ ಸುಂದರಿ ಅಮ್ಮನವರನ್ನು ಆರಾಧಿಸಿಕೊಂಡು ಬಂದ ಇವರು ವೇದ ಉಪನಿಷತ್ತುಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ . ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ . ಸದಾ ಕಾಲ ಲೋಕದ ಹಿತವನ್ನು ಬಯಸುವ ಇವರು ಶ್ರೀ ವೈಷ್ಣವ ತತ್ವದ ತಮ್ಮ ಪಾರಂಪರ್ಯವನ್ನು ಮುಂದುವರಿಸಿಕೊಂಡು ಬಂದಿರುವ ಇವರು ಪ್ರಸ್ತುತ ಅಂಜನಾದ್ರಿ ಸಿದ್ಧಿಪೀಠದ ಧರ್ಮಾಧಿಕಾರಿಗಳಾಗಿ ಧರ್ಮ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಶ್ರೀ ಅಂಜನಾದ್ರಿ ಸಿದ್ಧಿ ಪೀಠದ ವಿಶೇಷತೆ ಎಂದರೆ ಲೋಕಕಲ್ಯಾಣಾರ್ಥವಾಗಿ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ತಾಯಿ ಪ್ರತ್ಯಂಗಿರಾ ದೇವಿಯವರಿಗೆ ಒಣ ಮೆಣಸಿನಕಾಯಿ, ಮೆಣಸು, ಉಪ್ಪು ಇತ್ಯಾದಿ ವಸ್ತುಗಳಿಂದ ಹೋಮವನ್ನು ನಡೆಸಲಾಗುತ್ತದೆ . ಪ್ರತ್ಯಂಗಿರಾ ದೇವಿ , ತ್ರಿಪುರ ಸುಂದರಿ ಅಮ್ಮನವರು, ವೀರಾಂಜನೇಯ ಸ್ವಾಮಿ ಮೂರು ಶಕ್ತಿ ದೇವತೆಗಳನ್ನು ಒಂದೇ ನೆಲೆಯಲ್ಲಿ ಕಾಣಬಹುದು ಮತ್ತು ಪುರಾಣ ಪ್ರಸಿದ್ಧ ಶ್ರೀ ವೀರ ವೈಷ್ಣವ ನದಿಯ ದಡದಲ್ಲಿರುವ ಈ ದೇವಾಲಯವು ಪುಟ್ಟದಾದರೂ ಬಹಳ ರಮಣೀಯವಾಗಿದೆ . ಇಲ್ಲಿಯ ಪ್ರಭಂಜನ ಬಸವಣ್ಣನವರು ಶ್ರೀ ಕ್ಷೇತ್ರದ ಪಟ್ಟದ ಬಸಪ್ಪನವರಾಗಿದ್ದು ವಿಸ್ಮಯಗಳಿಗೆ ಸಾಕ್ಷಿಯಾಗಿದ್ದಾರೆ. ಇಲ್ಲಿ ಪ್ರತಿ ವಾರ ಗಂಗಸ್ನಾನ , ಅಮ್ಮನವರಿಗೆ ತುಪ್ಪದ ಆರತಿ ಬೆಳಗುವುದು ಭಕ್ತರು ನಡೆಸಿಕೊಂಡು ಬಂದಿರುವ ವಾಡಿಕೆಯಾಗಿದೆ .ಹಾಗೂ ಎಲ್ಲದಕ್ಕಿಂತ ಶ್ರೇಷ್ಠವಾದ ದಾನ ಅನ್ನದಾನ ಇದಕ್ಕೆ ಪ್ರತಿಯಾಗಿ ಇಲ್ಲಿ ಬರುವ ಭಕ್ತರಿಗೆ ಶ್ರೀ ಪೀಠದಲ್ಲಿ ದಾಸೋಹ ವ್ಯವಸ್ಥೆ ಕೂಡ ಇರುತ್ತದೆ. ಹಾಗೂ ಇಂತಹ ಪವಿತ್ರ ಪುಣ್ಯಕ್ಷೇತ್ರಕ್ಕೆ ತಾವೆಲ್ಲರೂ ಕೂಡ ಒಮ್ಮೆ ಭೇಟಿ ಕೊಡಿ ಸರ್ವಜನ ಸುಖಿನೋ ಭವಂತು ಎನ್ನುವಂತೆ ಅಂತ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸುವೆ
ಬರಹ: ಗುರುಪ್ರಸಾದ್ ಹಳ್ಳಿಕಾರ್
0 ಕಾಮೆಂಟ್‌ಗಳು