ಸುಡು ಬಿಸಿಲಿನಿಂದ ಕಂಗಲಾದ ಭೂಮಿಗೆ ವರುಣ ತಂಪೆರೆದಿದ್ದು ಮತ್ತೆ ಮಳೆಯಾಗುವ ಲಕ್ಷಣ ಕಾಣುತ್ತಿದೆ. ಇಂದು ಮಾ. 15 ರ ಬೆಳಗ್ಗಿನಿಂದ ಕೆಲವೆಡೆ ಮೋಡ ಕವಿದ ವಾತಾವರಣವಿದ್ದು ಸಂಜೆಯಾಗುತ್ತಲೆ ಮಳೆರಾಯ ಆರ್ಭಟಿಸುವ ಸೂಚನೆ ನೀಡಿದ್ದಾನೆ. ಈಗಾಗಲೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಕನ್ನಡ, ಹಾಸನ, ಉತ್ತರ ಕನ್ನಡ, ಉಡುಪಿ- ಚಿಕ್ಕಮಗಳೂರು, ಕೊಡಗು ಹಾಗೂ ಮೈಸೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಸಿಲ ತಾಪಕ್ಕೆ ಮನುಷ್ಯ ಮಾತ್ರವಲ್ಲ ಗಿಡ ಮರಗಳು ಸಹ ಒಣಗಿ ಬಾಡಿ ಹೋಗಿದ್ದು ವರುಣನ ಆಗಮನ ಒಂದಷ್ಟು ತಂಪು ನೀಡಲಿದೆ.
0 ಕಾಮೆಂಟ್‌ಗಳು