ದಿಗಂತ್ ನನ್ನು ಯಾರು ಅಪಹರಣ ಮಾಡಿದ್ದು...?

 


ರಾಜ್ಯದ್ಯಾಂತ ಭಾರೀ ಸುದ್ದಿಯಾಗಿದ್ದಲ್ಲದೆ ಪೋಲಿಸರಿಗೆ ತಲೆನೋವಾಗಿ ಪರಿಣಮಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ. 


ಪರಂಗಿಫೇಟೆಯ ರೈಲ್ವೆ ಹಳಿಯಿಂದ ನಾಪತ್ತೆಯಾದ  ದಿಗಂತ್ ಮಾ. 8 ರಂದು ಮದ್ಯಾಹ್ನ ಉಡುಪಿಯ ಡಿ ಮಾರ್ಟ್ ನಲ್ಲಿ ಪತ್ತೆಯಾಗಿದ್ದಾನೆ. ಫೆ. 25 ರಂದು ಸಂಜೆ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಿಂದ ಕಾಲ್ಕಿತ್ತ ದ್ವಿತೀಯ ಪಿಯುಸಿ ಪೋರ ದಿಗಂತ್ ನೇರವಾಗಿ ರೈಲ್ವೆ ಹಳಿಯಲ್ಲಿ ತನ್ನ ಚಪ್ಪಳಿ, ಮೊಬೈಲ್ ನ್ನು ಬಿಟ್ಟು ಹೋಗಿದ್ದ, ಇದು ದೊಡ್ಡದೊಂದು ಸ್ಟೋರಿ ಕ್ರಿಯೇಟ್ ಆಗುವಂತೆ ಮಾಡಿದ್ದಲ್ಲದೆ ಸಂಘ ಪರಿವಾರದವರಿಗೆ, ರಾಜಕೀಯದವರಿಗೆ ಇದುವೆ ಆಹಾರವಾಗಿ ಬಿಟ್ಟಿತ್ತು. ದಿಗಂತ್ ನಾಪತ್ತೆಯಾಗಿದ್ದಾನೆಂಬ ಸುದ್ದಿ ಹಬ್ಬಿದ್ದೆ ತಡ ಪೋಲಿಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ, ದಿಗಂತ್ ಪತ್ತೆ ಹಚ್ಚುವಲ್ಲಿ ವಿಫಲವಾಗಿದ್ದಾರೆಂದೆಲ್ಲ ಆರೋಪಿಸಿದ್ದರು.


ದಿಗಂತ್ ಮನೆಯವರು ಈ ಪ್ರಕರಣವನ್ನು ಹಿಡಿದು ನ್ಯಾಲಯದ ಮೆಟ್ಟಿಲೇರಿದ್ದರಿಂದ ಮಾ.12ರಂದು ಕೋರ್ಟಿಗೆ ಮಾಹಿತಿ ನೀಡಲೇಬೇಕಾದ ಅನಿರ್ವಾಯತೆ ಪೊಲೀಸರ ಮೇಲಿತ್ತು.  ಶನಿವಾರ ಬೆಳಗ್ಗೆ ಫರಂಗಿಪೇಟೆ, ವಳಚ್ಚಿಲ್‌ ಆಸುಪಾಸಿನಲ್ಲಿ ಪೊಲೀಸ್‌ ಡಾಗ್‌ ಸ್ಕ್ಯಾಡ್‌ ಕರೆಸಿ ಕೂಡಾ ಶೋಧ ಕಾರ್ಯ ಮಾಡಿದ್ದರು. ಇನ್ನೊಂದು ಕಡೆ ಮನೆ ಮಂದಿ ಕೂಡಾ ದೇವರಿಗೆ ಹರಕೆ ಹೊತ್ತು  ಮಗ ಜೀವಂತವಾಗಿ ಸಿಗಬೇಕೆಂದು ಪ್ರಾರ್ಥಿಸಿದ್ದರು. 


ದೇವರ ಇಚ್ಚೆ, ಹಾಗೂ ಪೋಲಿಸರ ಆಹೋರಾತ್ರಿ ಶ್ರಮ, ಒಂದು ಕ್ಷಣವೂ ವಿರಾಮಿಸದೆ ನಾಪತ್ತೆಯಾದ ದಿಗಂತ್ ನನ್ನು ಪತ್ತೆ ಹಚ್ಚುವಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲು ದ.ಕ ಪೋಲಿಸ್ ವರಿಷ್ಠಾಧಿಕಾರಿಗಳು ಪೋಲಿಸರ ತಂಡ ರಚಿಸಿದ್ದರು. ಇದೆಲ್ಲದ್ದಕ್ಕೂ ಕೊನೆಗೂ ಫಲ ಸಿಕ್ಕಿದೆ. 


"ನಿಜಕ್ಕೂ ದಿಗಂತ್ ನನ್ನು ಅಪಹರಿಸಿದ್ದರೆ..?


ಫೆ.25 ರಂದು ದಿಗಂತ್‌ ನಾಪತ್ತೆಯಾಗಿದ್ದು, ಆತ ಅಂದೇ ಶಿವಮೊಗ್ಗ ಬಸ್ ಹತ್ತಿದ್ದಾನೆ. ರೈಲ್ವೇ ಟ್ರಾಕ್ ನಲ್ಲಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಕಾಲಿಗೆ ಸ್ವಲ್ಪ ಗಾಯವಾಗಿದ್ದರಿಂದ ಕಾಲಿನಲ್ಲಿ ರಕ್ತ ಹೊರಬಂದಿತ್ತು, ಅದೇ ರಕ್ತ ಅವನ ಚಪ್ಪಲಿಯ ಮೇಲೆ ಚೆಲ್ಲಿತ್ತು. ಆ  ಚಪ್ಪಲಿಯನ್ನು ಕಳಚಿ ಗೆಳೆಯನಿಂದ ತರಿಸಿದ್ದ ಶೂ ಧರಿಸಿದ್ದ. ಆ ಕ್ಷಣ ಒಂದು ಕ್ರಿಮಿನಲ್ ಐಡಿಯಾ ಬಳಸಿದ್ದಾನೆ ದಿಗಂತ್.


ಮಂಗಳೂರಿನ ಸ್ಟೇಟ್ ಬ್ಯಾಂಕ್ ತನಕ ಯಾರದ್ದೋ ಬೈಕ್ ನಲ್ಲಿ ತೆರಳಿದ ದಿಗಂತ್ ಅಲ್ಲಿಂದ ಬಸ್ಸಿನ ಮೂಲಕ ಶಿವಮೊಗ್ಗ ಬಸ್ ಏರಿ ಸಾಂಸ್ಕೃತಿಕ ನಗರಿ ಮೈಸೂರಿಗೆ ತೆರಳಿದ್ದ. ಅಲ್ಲಿಂದ ಬೆಂಗಳೂರಿಗೆ ಹೋಗಿ ಅಲ್ಲಿ ಒಂದೆರಡು ದಿನ ಅಲ್ಲಿ ಇಲ್ಲಿ ಸುತ್ತಾಡಿದ್ದಾನೆ. ಕೈಯಲ್ಲಿದ್ದ ಹಣ ಖಾಲಿಯಾದಾಗ ಬೆಂಗಳೂರು ಹೊರವಲಯದ ರೆಸಾರ್ಟ್‌ ಒಂದರಲ್ಲಿ ಮೂರು ದಿನಗಳ ಕಾಲ ಕೆಲಸ ಮಾಡಿ, ಕೈಯಲ್ಲಿ ಸ್ವಲ್ಪ ಹಣ ಸಂಪಾಧಿಸಿ ನಂತರ ಅಲ್ಲಿಂದ ಬಸ್ಸಿನ ಮೂಲಕ ಶಿವಮೊಗ್ಗಕ್ಕೆ ಬಂದಿದ್ದಾನೆ. ಅಲ್ಲಿಂದ ಮತ್ತೆ ಮೈಸೂರಿಗೆ ಹೋಗಿದ್ದಾನೆ. ಶುಕ್ರವಾರ ರಾತ್ರಿ ಮತ್ತೆ ಮೈಸೂರಿನಿಂದ ಮುರ್ಡೇಶ್ವರ ತೆರಳುವ ರೈಲು ಸಿಕ್ಕಿದೆ. ಆ ರೈಲಿನಲ್ಲಿ ಉಡುಪಿಗೆ ಬಂದಿಳಿದಿದ್ದಾನೆ. ಅಲ್ಲಿ ಏನು ಮಾಡುವುದು ಎನ್ನುವ ಯೋಚನೆಯಲ್ಲಿರುವಾಗಲೇ ದಿಗಂತ್ ಕಣ್ಣೆದುರಿಗೆ  ಡಿಮಾರ್ಟ್‌ ಕಂಡಿದೆ. 


ಕೈಯಲ್ಲಿದ್ದ ಹಣವೂ ಖಾಲಿಯಾಗಿದ್ದರಿಂದ ಹಸಿವು ನೀಗಿಸಲು ಸ್ವಲ್ಪ ಕಷ್ಟವಾಗಿತ್ತು ಹಾಗಾಗಿ ಬಿಸ್ಕೇಟ್, ನೀರಿನ ಬಾಟಲ್ ತೆಗೆದುಕೊಳ್ಳುವುದಕ್ಕಾಗಿ ಡಿ ಮಾರ್ಟ್ ಪ್ರವೇಶ ಮಾಡಿದ್ದಾನೆ. ಮನೆಯಿಂದ ಬರುವಾಗ ಧರಿಸಿದ್ದ ಬಟ್ಟೆ, ಹಾಗೂ ಮೈಸೂರಿನಲ್ಲಿ ಒಂದು ಜೊತೆ ಬಟ್ಟೆ ಖರೀದಿಸಿದ್ದ ದಿಗಂತ್ ಇನ್ನು ಮುಂದಿನ ದಿನಗಳನ್ನು ಕಳೆಯಲೆಂದು ಬಟ್ಟೆಯ ಅವಶ್ಯಕತೆ ಇತ್ತು ಹಾಗಾಗಿ ಡಿ ಮಾರ್ಟ್ ನಲ್ಲೆ ಬಟ್ಟೆ ಖರೀದಿಸಲು ಮುಂದಾಗಿದ್ದಾನೆ. ಆದರೆ ಆತನ ಕೈಯಲ್ಲಿ  ಹಣ ಇಲ್ಲದಿರುವ ಕಾರಣ ಬಟ್ಟೆ ಖರೀದಿಸಿ ಅಲ್ಲಿಂದ ಹಣ ಕೊಡದೆ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಕೂಡಲೆ ಇದನ್ನರಿತ ಡಿ ಮಾರ್ಟ್ ಸಿಬ್ಬಂದಿ ಆತನ್ನು ತಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವನ ಚಲನವಲನ ಗಮನಿಸಿದ ಅವರು ದಿಗಂತ್ ಎಂಬುದನ್ನು ತಿಳಿದು ಮನೆಯವರಿಗೆ ಕರೆ ಮಾಡಲು ಸೂಚಿಸಿದ್ದಾರೆ.

ಮನೆ ಮಂದಿಯಲ್ಲಿ ಮಾತನಾಡಿಸಿದ ನಂತರ ಅವನು ನಾಪತ್ತೆಯಾಗಿದ್ದ ದಿಗಂತ್ ಎಂಬುದು ತಿಳಿದುಬಂದಿದ್ದು ಆತನನ್ನು ಡಿ ಮಾರ್ಟ್ ಸಿಬ್ಬಂದಿಗಳು ದ.ಕ ಪೋಲಿಸರ ಕೈಗೊಪ್ಪಿಸಿದ್ದಾರೆ. 


ತಪ್ಪು ಮರೆಮಾಚಲು ನನ್ನನ್ನು ಯಾರೋ ಎತ್ತಾಕ್ಕೊಂಡು ಹೋಗಿದ್ದರು ಅಮ್ಮಾ ಎಂದು ಸುಳ್ಳು ಹೇಳಿದ್ದಾನೆ. ಶನಿವಾರ ಮನೆಯ ಮುಂದೆ ಬೆಳಗ್ಗೆ ರೈಲು ಹಳಿಯಲ್ಲಿಯೇ ಮುರ್ಡೇಶ್ವರ ರೈಲು ಹೋಗಿತ್ತು. ಅಲ್ಲಿ ಆತ ಪೊಲೀಸರು ಹುಡುಕಾಟ ಮಾಡುವುದನ್ನೂ ಕಣ್ಣಾರೆ ಕಂಡಿದ್ದಾನೆ. ಇದನ್ನು ಈತ ವಿಚಾರಣೆ ಸಂದರ್ಭದಲ್ಲಿ ಪೊಲೀಸರಲ್ಲಿ ಹೇಳಿದ್ದಾನೆ ಎಂದು ವರದಿಯಾಗಿದೆ. ಇದೆಲ್ಲಾ ಕೇಳಿದ ಪೊಲೀಸರು ಯಾಕೆ ನೀನು ಹೀಗೆ ಮಾಡಿದೆ? ಏನು ಸಮಸ್ಯೆ ಎಂದು ಕೇಳಿದಾಗ, ನಂಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿತ್ತು. ಮನೆ ಮಂದಿ ನನಗೆ ಬೈದಿದ್ದರು. ಪಿಯುಸಿ ಫೈನಲ್‌ ಪರೀಕ್ಷೆ ಕೂಡಾ ಶುರುವಾಗಿತ್ತು. ಇದರಿಂದ ಮನೆ ಬಿಟ್ಟು ಹೋದೆ. ಬೇರೆನೂ ಇಲ್ಲ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.



"ಮನೆಯಲ್ಲಿನ‌ ವಾತಾವರಣ ಹೇಗಿರಬೇಕು...?"


ಅದೇನೆ ಇರಲಿ ಮೊಬೈಲ್ ಗೆ ಅಡಿಟ್ಟ್ ಆಗಿದ್ದ ದಿಗಂತ್ ಪರೀಕ್ಷಾ ಸಮಯ ಹತ್ತಿರ ಇರುವಾಗ ಸರಿಯಾಗಿ ಓದದಿರುವ ಕಾರಣ ಮನೆಮಂದಿಯಿಂದ ಬೈಗುಳ ತಿಂದಿದ್ದ. ಇದರಿಂದ ಬೇಸರಗೊಂಡಿದ್ದ ದಿಗಂತ್ ಮನೆಬಿಟ್ಟು ದೂರ ಎಲ್ಲದರೂ ನೆಲ ಕಾಣುವ ಕನಸು ಕಂಡಿದ್ದ ಎನ್ನಲಾಗಿದೆ. ಮನೆಯೊಳಗಿನ ವಾತವರಣ ನೆಮ್ಮದಿ  ತರದ ಕಾರಣ ದಿಗಂತ್ ಮನೆ ಬಿಟ್ಟು ಹೊರಹೋಗಿದ್ದಾನೆಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಮಕ್ಕಳಿಗೆ ಪರೀಕ್ಷಾ ಸಮಯಗಳಲ್ಲಿ ಅದುವೇ ತಲೆ ನೋವಾಗಿರುತ್ತದೆ ಇದರ ನಡುವೆ ಮನೆಯವರು ಇನ್ನು ಹೆಚ್ಚಿನ ಒತ್ತಡ ಕೊಟ್ಟು ಹಿಂಸಿಸಿದಂತೆ ಮಾಡುವುದು ಸರಿಯಲ್ಲ, ಇದೀಗ ಮಗ ದಿಗಂತ್ ಜೀವಂತವಾಗಿ ಕೈಗೆ ಸಿಕ್ಕಿರುವುದು ದೇವರ ಅನುಗ್ರಹ, ಪೋಲಿಸರ ಕಾರ್ಯವೈಕರಿಯಿಂದ.

ಇದೊಂದ‌ ಪ್ರಕರಣ ಉಳಿದೆಲ್ಲ ವಿದ್ಯಾರ್ಥಿಗಳಿಗೂ, ಹೆತ್ತವರಿಗೂ ಪಾಠವಾಗಿರಲಿ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು